ಮಡಿಕೇರಿ, ಅ. ೨೪: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎ.ಐ.ಸಿ.ಸಿ.) ಯ ನೂತನ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಂಡಿದ್ದಾರೆ. ಪಕ್ಷದ ಆಂತರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಖರ್ಗೆ ಅವರು ಇದೀಗ ರಾಷ್ಟಿçÃಯ ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿದ್ದು, ಇದರ ಬೆನ್ನಲ್ಲೇ ಕೆಲವಾರು ಚರ್ಚೆಗಳೂ ಆರಂಭಗೊAಡಿವೆ.
ಕರ್ನಾಟಕ ರಾಜ್ಯದಿಂದ ಎ.ಐ.ಸಿ.ಸಿ. ಅಧ್ಯಕ್ಷರಾಗಿ ಎರಡನೆಯ ವ್ಯಕ್ತಿಯಾಗಿ ಖರ್ಗೆ ಅವರು ಇದೀಗ ಆಯ್ಕೆಯಾಗಿರುವುದರಿಂದ ರಾಜ್ಯದಲ್ಲಿ ಇದರ ಪೂರಕ ಬೆಳವಣಿಗೆಗಳ ಕುರಿತು ಕಾಂಗ್ರೆಸ್ಸಿಗರಲ್ಲಿ ಹೊಸ ಆಶಾಭಾವನೆ ಎದುರಾಗಿದೆ.
ಖರ್ಗೆ ಅವರ ಆಯ್ಕೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕೂಡ ಸ್ವಾಗತಿಸಿದೆ. ಪ್ರಸ್ತುತ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ, ಮಾಜಿ ಸಿ.ಎಂ. ಸಿದ್ದರಾಮಯ್ಯ ರೊಂದಿಗೆ ಇದೀಗ ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಲಭಿಸಿರು ವುದು ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಈ ಬಾರಿ ಪೂರಕ ವಾತಾವರಣ ಸೃಷ್ಟಿಸಲಿದೆ ಎಂಬುದು ಕಾಂಗ್ರೆಸ್ಸಿಗರ ಹೊಸ ನಿರೀಕ್ಷೆಯಾಗಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಖರ್ಗೆ ಅವರಿಗೆ ಕೊಡಗಿನ ಬಗ್ಗೆ ಸಂಪೂರ್ಣ ಅರಿವು ಇದೆ. ಈ ಹಿಂದೆ ಕೆ.ಪಿ.ಸಿ.ಸಿ. ಅಧ್ಯಕ್ಷ ರಾಗಿದ್ದ ಅವರು, ಜಿಲ್ಲೆಯ ಕಾಂಗ್ರೆಸ್ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಕೊಡಗಿನ ವಾಸ್ತವ ಚಿತ್ರಣವನ್ನೂ ಅವರು ಅರಿತುಕೊಂಡವರಾಗಿದ್ದಾರೆ. ಹೀಗಾಗಿ ಇವರ ನೇಮಕ ಕೊಡಗು ಕಾಂಗ್ರೆಸ್ಗೂ ಒಂದಷ್ಟು ಹೆಚ್ಚಿನ ಬಲ ತಂದುಕೊಡ ಲಿದೆ ಎಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷದಲ್ಲಿ ಹಲವು ಆಸಕ್ತರು ಇದ್ದಾರೆ. ಇವರೆಲ್ಲರೂ ಪಕ್ಷಕ್ಕೆ ಕೆಲಸ ಮಾಡುತ್ತಿದ್ದು, ಒಗ್ಗಟ್ಟಿನಿಂದ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದರು. ಕೊಡಗು ಕಾಂಗ್ರೆಸ್ನಲ್ಲಿ ಡಿ.ಕೆ. ಬಣ, ಸಿದ್ದರಾಮಯ್ಯ ಬಣ, ಖರ್ಗೆ ಬಣ ಎಂಬ ಗುಂಪುಗಳು ಇಲ್ಲ. ಎಲ್ಲರೂ ಪಕ್ಷಕ್ಕೆ ಬದ್ಧರಾಗಿದ್ದಾರೆ ಎನ್ನುವ ಧರ್ಮಜ ಉತ್ತಪ್ಪ, ಈ ಬಾರಿ ಹೊಸ ನಿರೀಕ್ಷೆ ಖಂಡಿತವಾಗಿಯೂ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.