ಚೆಟ್ಟಳ್ಳಿ, ಅ. ೨೫: ಕ್ರೀಡೆಗಳಿಂದ ಮಾತ್ರ ಎಲ್ಲರ ಮನಸ್ಸುಗಳನ್ನು ಒಂದುಗೂಡಿಸಲು ಸಾಧ್ಯ ಎಂದು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ. ಕೆ. ಶಶಿಕುಮಾರ್ ಅಭಿಪ್ರಾಯಪಟ್ಟರು. ಕಂಡಕರೆಯ ಗಾಂಧಿ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಅಂಡರ್-೨೦ ಕಾಲ್ಚೆಂಡು ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆ ಕಾಣ ಬಹುದು. ಕಂಪ್ಯೂಟರ್ ಯುಗದಲ್ಲಿ ಮುಳುಗಿ, ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಗಳಿಂದ ದೂರ ಉಳಿಯುತ್ತಿದ್ದಾರೆ. ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳ ಬೇಕಾಗಿ ಕರೆ ನೀಡಿದರು.

ಜಿಲ್ಲೆಯ ಮುಖ್ಯ ಪಟ್ಟಣಗಳಿಂದ ಬರುವ ಎಲ್ಲರಿಗೂ ಚೆಟ್ಟಳ್ಳಿ ಮಧ್ಯಭಾಗ ವಾಗಿದೆ. ಹಿಂದಿನ ಕಾಲದಲ್ಲಿ ಚೆಟ್ಟಳ್ಳಿಗೆ ಹತ್ತನೇ ಮೈಲು ಎಂಬ ಹೆಸರು ಕೂಡ ಇತ್ತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಆಂಬ್ಯುಲೆನ್ಸ್ ಅತ್ಯವಶ್ಯಕ ವಾಗಿದ್ದು, ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದ್ದು, ಚೆಟ್ಟಳ್ಳಿ ಭಾಗದ ಎಲ್ಲಾ ಸಂಘ-ಸAಸ್ಥೆ ಗಳು ಕೈ ಜೋಡಿಸಬೇಕಾಗಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗಾಂಧಿ ಯುವಕ ಸಂಘದ ಅಧ್ಯಕ್ಷ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಕ್ರೀಡಾಕೂಟ ಗಳು ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ನಡೆಯಬೇಕಾಗಿದೆ. ಕ್ರೀಡಾಕೂಟ ಗಳನ್ನು ಹಣ ಮಾಡುವ ದಂಧೆಯಾಗಿ ಯಾರೂ ಕೂಡ ಬಳಸಬಾರದು ಹಾಗೂ ಕ್ರೀಡಾಕೂಟ ಗಳು ಕಾಟಾಚಾರಕ್ಕೆ ಆಯೋಜನೆಗೊಳ್ಳ ಬಾರದು. ಯುವಕರು ಕ್ರೀಡೆಯಲ್ಲಿ ಮಾತ್ರ ಆಸಕ್ತಿ ವಹಿಸದೆ, ತಮ್ಮ ಶಿಕ್ಷಣದ ಕಡೆಗೆ ಹೆಚ್ಚು ಗಮನಕೊಡ ಬೇಕೆಂದು ಇಸ್ಮಾಯಿಲ್ ಕಂಡಕರೆ ಹೇಳಿದರು. ಕ್ರೀಡಾಕೂಟವನ್ನು ಉದ್ದೇಶಿಸಿ ಚೆಟ್ಟಳ್ಳಿ ಗ್ರಾಮ ಪಂಚಾ ಯಿತಿ ಸದಸ್ಯ ಸಿ.ಇ ತೀರ್ಥಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಚೆಟ್ಟಳ್ಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಸಿ ಸತ್ಯನಾರಾಯಣ ಮಾತನಾಡಿದರು.ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ

ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ನೀಡಲಾಗುತ್ತಿರುವ ಅತ್ಯುತ್ತಮ "ಸಮಾಜ ಸೇವಕ" ಪ್ರಶಸ್ತಿಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ ಶಶಿಕುಮಾರ್ ಪಡೆದುಕೊಂಡರು. ಅವರನ್ನು ಗಾಂಧಿ ಯುವಕ ಸಂಘದ ವತಿಯಿಂದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಸವಾದ್ ಉಸ್ಮಾನ್ ಪ್ರಾರ್ಥನೆ ನೆರವೇರಿಸಿದರು.

ವೇದಿಕೆಯಲ್ಲಿ ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಪ್ಪ, ಚೆಟ್ಟಳ್ಳಿ ಪೊಲೀಸ್ ಕಾನ್ಸ್ಟೇಬಲ್ ಮಹೇಶ್, ಕಾಫಿ ಲವ್ವರ್ಸ್ ತಂಡದ ಪ್ರಮುಖ ಜಗದೀಶ್ ಪೂಜಾರಿ, ಗಾಂಧಿ ಯುವಕ ಸಂಘದ ಸಂಘಟನಾ ಕಾರ್ಯದರ್ಶಿ ಗಳಾದ ಸುಹೈಲ್ ಓ.ಎಸ್, ಉನೈಸ್ ಕೆ.ಎಂ., ಉಪಾಧ್ಯಕ್ಷರುಗಳಾದ ಹಕೀಂ ವಿ.ಹೆಚ್., ಉವೈಸ್ ಸಿ.ಎ., ಇರ್ಷಾದ್ ಕೆ.ಎಂ. ಇದ್ದರು. ಪಂದ್ಯಾವಳಿಯ ತೀರ್ಪುಗಾರರಾಗಿ ಇರ್ಷಾದ್ ಕೆ.ಎಂ., ಷರೀಫ್ ಪಿ.ಎಂ. ಹಾಗೂ ಸವಾದ್ ಈ.ಯು. ಕಾರ್ಯನಿರ್ವಹಿಸಿದರು.