*ಗೋಣಿಕೊಪ್ಪ, ಅ. ೨೪: ಮಡಿಕೇರಿ ಕೋಟೆ ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ಜಿಲ್ಲಾ ಆಡಳಿತ, ಕೊಡಗು ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರಿಯ ಸೇವಾ ಯೋಜನಾ ವತಿಯಿಂದ ನಡೆಯಿತು.

ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ಕಸ ಹೆಕ್ಕುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ಮನೆ, ದೇಹ, ಮನಸ್ಸು ಹೇಗೆ ಶುದ್ಧದಲ್ಲಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಕೂಡ ಸ್ವಚ್ಛತೆಯಿಂದ ಕೂಡಿರಲು ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ಹೇಳಿದರು.

ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಕೆ.ಕೆ ಗಣೇಶ್, ನೆಹರು ಯುವ ಕೇಂದ್ರ ಸಿಬ್ಬಂದಿ ದೀಪ್ತಿ, ರಾಷ್ಟ್ರಿಯ ಸೇವಾ ಕಾರ್ಯಕರ್ತೆ ರಂಜಿತಾ, ಜಿಲ್ಲಾ ಯುವ ಒಕ್ಕೂಟ ಖಜಾಂಚಿ ಕೆ.ಎಂ ಮೋಹನ್, ಕೋಟೆ ಮೇಲ್ವಿಚಾರಕÀ ಬಿ.ಎಂ ಶಿವಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.