ಬ್ರಿಟನ್ನ ನೂತನ ಪ್ರಧಾನಿಯಾಗಿ ಭಾರತೀಯ ರಿಷಿ ಸುನಕ್
ಲಂಡನ್, ಅ. ೨೪: ಬ್ರಿಟನ್ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಸಂಜೆ ೬.೩೦ರ ಸುಮಾರಿಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಇನ್ನು ತಾ. ೨೮ರಂದು ರಿಷಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಿಷಿ ಸುನಕ್ಗೆ ಬರೋಬ್ಬರಿ ೧೯೩ ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ಗೆ ೨೬ ಸಂಸದರು ಮಾತ್ರ ಬೆಂಬಲ ನೀಡಿದ್ದು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿ ರೇಸ್ನಿಂದ ಹೊರಗುಳಿದ ನಂತರ ಅವರ ನಿಷ್ಠರಾದ ಪ್ರೀತಿ ಪಟೇಲ್ , ಭಾರತೀಯ ಸಂಜಾತ ರಿಷಿ ಸುನಕ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರು ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ನಿಶ್ಚಿತವಾಗಿತ್ತು. ಇನ್ಫೋಸಿಸ್ನ ಸಂಸ್ಥಾಪಕ ನಾರಾಯಣ ಮೂರ್ತಿ-ಸುಧಾ ಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ೪೫ ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಬ್ರಿಟನ್ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಮುಂದೆ ದೊಡ್ಡ ಸವಾಲುಗಳಿವೆ.
ಯುದ್ಧ ಭಾರತದ ಕೊನೆಯ ಆಯ್ಕೆ - ಮೋದಿ
ಕಾರ್ಗಿಲ್, ಅ. ೨೪: ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ, ಆದರೆ ರಾಷ್ಟçದ ಮೇಲೆ ಯಾರೇ ಕೆಟ್ಟ ದೃಷ್ಟಿ ಬೀರಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಶಕ್ತಿ ಮತ್ತು ತಂತ್ರಗಳನ್ನು ನಮ್ಮ ಸಶಸ್ತç ಪಡೆ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್ನ ಕಾರ್ಗಿಲ್ಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು, ಈ ವೇಳೆ ಯೋಧರಿಗೆ ಸಿಹಿ ಹಂಚಿ ಮಾತನಾಡಿದರು. ಕಾರ್ಗಿಲ್ನ ಈ ವಿಜಯದ ಭೂಮಿಯಲ್ಲಿ ನಿಂತು ದೇಶದ ಹಾಗೂ ವಿಶ್ವದ ಜನರಿಗೆ ದೀಪಾವಳಿ ಶುಭ ಕೋರುತ್ತೇನೆ. ಕಾರ್ಗಿಲ್ನಲ್ಲಿ ನಮ್ಮ ಸೇನೆಯು ಭಯೋತ್ಪಾದನೆಯ ಚಟುವಟಿಕೆಯನ್ನು ಹತ್ತಿಕ್ಕಿದೆ. ಇಲ್ಲಿಯವರೆಗೆ, ದೇಶವು ಆಚರಿಸಿದ ವಿಜಯದ ದೀಪಾವಳಿಯನ್ನು ನೆನಪಿಸಿಕೊಳ್ಳಿ. ಏಕೆಂದರೆ, ನಮ್ಮ ಸೇನಾ ಪಡೆಗಳು ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿವೆ. ದೇಶದ ಪ್ರತಿ ನಾಗರಿಕನು ನೆಮ್ಮದಿಯಿಂದ ಮಲಗಲು ನಮ್ಮ ಯೋಧರು ಕಾರಣ. ನಿಮ್ಮ ತ್ಯಾಗ ಯಾವಾಗಲೂ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ
ರಾಮನಗರ, ಅ. ೨೪: ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ವಾಮೀಜಿ ಬಂಡೇಮಠದ ಬೆಟ್ಟದ ಮೇಲಿನ ಮಠದ ಕಿಟಕಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೂರು ತಿಂಗಳ ಹಿಂದೆ ಕಡಲೆ ಮಠದ ಸ್ವಾಮೀಜಿ ಕೂಡ ಇದೇ ರೀತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.
‘ಸಿತ್ರಾಂಗ್' ಚಂಡಮಾರುತದ ಭೀತಿ
ಕೊಲ್ಕತ್ತಾ, ಅ. ೨೪: 'ಸಿತ್ರಾಂಗ್' ಚಂಡಮಾರುತದ ಸಂಭವನೀಯ ಹಾನಿ ಎದುರಿಸಲು ಪಶ್ಚಿಮ ಬಂಗಾಳ ಸರ್ಕಾರ ಜನರನ್ನು ಸ್ಥಳಾಂತರಿಸುವುದು ಮತ್ತು ಆಶ್ರಯ ತಾಣಗಳಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸಿಬ್ಬಂದಿಯೊAದಿಗೆ ವಿಪತ್ತು ನಿರ್ವಹಣಾ ಇಲಾಖೆಯ ಹಲವು ತಂಡಗಳನ್ನು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಯಾವುದೇ ಪ್ರವಾಸಿಗರು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯಲು ಅವಕಾಶ ನೀಡುತ್ತಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊAದಿಗೆ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಿತ್ರಾಂಗ್ ಚಂಡಮಾರುತದಿAದ ಭಾರೀ ಮಳೆಯಾಗಲಿದ್ದು, ಗಂಟೆಗೆ ೯೦ ರಿಂದ ೧೦೦ ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ದಕ್ಷಿಣ ೨೪ ಪರಗಣ, ಉತ್ತರ ೨೪ ಪರಗಣ, ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಆಲರ್ಟ್ ಘೋಷಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸ್ ಚಾಲನೆ ಸಂದರ್ಭ ಹೃದಯಾಘಾತ
ರಾಯಚೂರು, ಅ. ೨೪ : ರಾಯಚೂರಿನಿಂದ ಬೆಳಗಾವಿಗೆ ಹೊರಟಿದ್ದ ರಾಜಹಂಸ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಲಿಂಗಸೂಗೂರಿನ ಚಿಕ್ಕಹೆಸರೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು ಬಸ್ ಚಾಲಕ ಶ್ರೀನಿವಾಸ್ ಎಂಬುವರು ಹೃದಯಾಘಾತವಾಗಿದೆ. ಹೀಗಾಗಿ ಬಸ್ ರಸ್ತೆ ಬದಿ ಪಲ್ಟಿಯಾಗಿದ್ದು ಬಸ್ ನಲ್ಲಿದ್ದ ೧೪ ಮಂದಿಗೆ ಗಾಯಗಳಾಗಿವೆ. ಬಸ್ಸಲ್ಲಿದ್ದ ಪ್ರಯಾಣಿಕರ ಪೈಕಿ ೧೪ ಜನ ಗಾಯಗೊಂಡಿದ್ದು ಅವರನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಬ್ಬಿನ ಗದ್ದೆಯಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಚಿರತೆ
ಬೆಂಗಳೂರು/ಮೈಸೂರು, ಅ. ೨೪ : ಕಬ್ಬಿನ ಗದ್ದೆಯಲ್ಲಿ ಚಿರತೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳ ಕೂಗು ಕೇಳಿದ ಕಬ್ಬಿನ ಗದ್ದೆ ಮಾಲೀಕರು ಗ್ರಾಮಸ್ಥರಿಗೆ ಮಾಹಿತಿ ನೀಡಿ ನಂತರ ಚಿರತೆ ಹಾಗೂ ಅದರ ಮರಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಮೈಸೂರಿನ ಟಿ.ನರಸೀಪುರದಲ್ಲಿ ನಡೆದಿದೆ. ಚಿರತೆ ಶಬ್ದ ಕೇಳಿದ ಕಬ್ಬಿನ ಗದ್ದೆ ಮಾಲೀಕರು ಭಯಭೀತರಾಗಿದ್ದರು. ನಂತರ ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಚಿರತೆ ಹಾಗೂ ಮರಿಗಳನ್ನು ಅಧಿಕಾರಿಗಳ ವಶಕ್ಕೆ ನೀಡಿದರು. ಸೋಸಲೆ ಹೋಬಳಿಯ ಕೆಂಪಾಪುರದ ರೈತ ಶಂಕರ ಚಿಕ್ಕಣ್ಣ ಅವರು ಮಾತನಾಡಿ, ಈ ಹಿಂದೆ ನಾನು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೆ. ೧೧ ದಿನಗಳ ಹಿಂದೆ ಚಿರತೆ ತನ್ನ ಜಮೀನಿನಲ್ಲಿದ್ದ ನಾಯಿಗಳನ್ನು ಹೊತ್ತೊಯ್ದಿರುವುದಾಗಿ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಕ್ಷಮೆಯಾಚಿಸಿದ ಸಚಿವ ಸೋಮಣ್ಣ
ಚಾಮರಾಜನಗರ, ಅ. ೨೪: ತಾವು ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ಸಚಿವ ವಿ. ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ. ನಾನು ೪೦ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ಕಾರ್ಯಕ್ರಮವನ್ನು ಸಮಾಜದ ದೀನದಲಿತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆಯೋಜಿಸಲಾಗಿತ್ತು. ನಾನು ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲವಾದರೂ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಹಾಗೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಪತ್ರಕರ್ತರಿಗೆ ಸೋಮಣ್ಣ ಹೇಳಿದ್ದಾರೆ. ಘಟನೆ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿರುವ ಸಚಿವರು, ಕೆಂಪಮ್ಮ ಎಂಬಾಕೆ ಪದೇ ಪದೇ ವೇದಿಕೆಗೆ ಆಗಮಿಸುತ್ತಿದ್ದರು ಇದರಿಂದ ಅಸಮಾಧಾನಗೊಂಡು ಆಕೆಗೆ ವೇದಿಕೆ ಮೇಲೆ ಬರಬೇಡಿ ಎಂದು