ವೀರಾಜಪೇಟೆ, ಅ.೨೩: ವೀರಾಜಪೇಟೆ ನಗರದಲ್ಲಿರುವ ತಾಲೂಕು ಮೈದಾನವನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕ್ರೀಡೆಯ ಬೆಳವಣಿಗಾಗಿ ವಿದ್ಯುತ್ ಹಾಗೂ ಕ್ರೀಡಾ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ತಹಶಿಲ್ದಾರ್ ಅರ್ಚನಾ ಭಟ್ ಸೂಚಿಸಿದರು
ಇತ್ತೀಚೆಗೆ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ವಿರಾಜಪೇಟೆಯ ಹಲವು ಕ್ರೀಡಾಪಟುಗಳೊಂದಿಗೆ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲೂಕು ಮೈದಾನ ಅಭಿವೃದ್ಧಿ ಹಾಗೂ ಜೂನಿಯರ್ ಕಾಲೇಜು ಬಳಿಯ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾಪಟುಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು. ಈ ಮನವಿಗೆ ಸ್ಪಂದಿಸಿದ ತಹಶಿಲ್ದಾರ್ ಅರ್ಚನಾ ಭಟ್ ಅವರು ಈ ಸಂಬAಧ ತಾಲೂಕು ಕಛೇರಿ ಸಭಾಂಗಣದಲ್ಲಿ ಪುರಸಭೆ ಅಧಿಕಾರಿಗಳು, ಕೊಡಗು ವೆಲ್ ಫೇರ್ ಫೌಂಡೇಷÀನ್ ಸದಸ್ಯರು ಇನ್ನಿತರ ಅಧಿಕಾರಗಳ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಗೆ ಪ್ರೋತ್ಸಹ ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು, ತಾಲೂಕು ಮೈದಾನವನ್ನು ಸ್ವಚ್ಛತೆಗೊಳಿಸಿ ಸೌಲಭ್ಯ ಒದಗಿಸಿಕೊಡುವುದರೊಂದಿಗೆ. ಜೂನಿಯರ್ ಕಾಲೇಜ್ ಬಳಿಯ ಒಳಂಗಣ-ಕ್ರೀಡಾAಗಣದ ಕಾಮಗಾಗಿ ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಮುಕ್ತವಾಗಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕೊಡಗು ವೆಲ್ ಫೇರ್ ಫೌಂಡೇಷನ್ ಸಂಚಾಲಕರಾದ ಮಾದಂಡ ಎಸ್.ಪೂವಯ್ಯ, ಕೊಡವ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಒಕ್ಕೂಟದ ಸಂಚಾಲಕ ಅಮ್ಮಣಿಚಂಡ ರವಿ ಉತ್ತಪ್ಪ, ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ತಾತಂಡ ಜೋತಿ, ಪುರಸಭೆ ಅಧ್ಯಕ್ಷೆ ಸುಸ್ಮಿತಾ, ಮುಖ್ಯಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮ್ ಕುಮಾರ್, ಸದಸ್ಯರಾದ ಜೂನಾ, ಡಿ.ಪಿ.ರಾಜೇಶ್, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.