ಮಡಿಕೇರಿ, ಅ. ೨೩: ಕೊಡಗು ರಕ್ಷಣಾ ವೇದಿಕೆಯ ಕೋಪಟ್ಟಿ, ಚರಂಡೇಟಿ ಮತ್ತು ಸಿಂಗತ್ತೂರು ಘಟಕ ರಚನೆಯಾಗಿದ್ದು, ಅಧ್ಯಕ್ಷರಾಗಿ ಡೆಲಿಶ ಕುಮಾರ್ ಕೀಜನ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷರಾಗಿ ರೋಹಿತ್ ಪೊಡ ನೋಳನ, ಕಾರ್ಯದರ್ಶಿಯಾಗಿ ಕೆ. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಚರಣ್ ಪೊಡನೋಳನ, ಖಜಾಂಚಿಯಾಗಿ ಮಿತೇಶ್ ಸೋಮೇಟ್ಟಿ ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ಪಿ.ವಿ. ಯತೀಶ್, ಕೆ. ಚೇತನ್, ಕೆ.ಟಿ. ವೇಣುಗೋಪಾಲ್, ಮಹೇಶ್, ಪಿ.ಎಸ್. ರೋಹಿತ್, ಬಿ. ರಂಜೀತ್, ಪಿ.ಎಲ್. ಪ್ರಸನ್ನ ಕುಮಾರ್, ಕೆ. ಸಾಕ್ಷಾತ್, ಪಿ.ಪಿ. ಪ್ರಮೋದ್, ಪಿ.ಜೆ. ಶರತ್ ಆಯ್ಕೆಯಾಗಿದ್ದಾರೆ ಎಂದು ಕೊ.ರ.ವೇ. ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.