ಮಡಿಕೇರಿ, ಅ. ೨೨: ಮಡಿಕೇರಿಯ ಕ್ರಿಸ್ಟಲ್ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‌ನ ೧೪೩ನೇ ವಾರ್ಷಿಕ ಮಹಾಸಭೆಯಲ್ಲಿ ಕ್ಲಬ್‌ನ ೨೦೨೨-೨೩ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿ.ಯು. ಅಶೋಕ್, ಉಪಾಧ್ಯಕ್ಷರಾಗಿ ಎ. ನಂದಾ ಬೆಳ್ಳಿಯಪ್ಪ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅರುಣ್ ಭಾವೆ, ಪಿ.ಎಂ. ಪವನ್ ಮೊಣ್ಣಪ್ಪ, ಪಿ.ಎ. ಮಂದಣ್ಣ, ಡಾ. ಎಂ.ಎA. ಚಂಗಪ್ಪ, ಟಿ.ಎಂ. ಪೂವಯ್ಯ, ಸೋಮಣ್ಣ ಕೊಳ್ಳಿಮಾಡ, ಎ.ಎ. ಚಂಗಪ್ಪ, ಬೊಪ್ಪಂಡ ಶ್ಯಾಮ್ ಪೂಣಚ್ಚ, ಕೆ.ಕೆ. ವಿಶ್ವನಾಥ್ ಮತ್ತು ಕೈಬಿಲಿರ ಹರೀಶ್ ಅಪ್ಪಯ್ಯ ಅವರನ್ನು ಆಯ್ಕೆ ಮಾಡಲಾಯಿತು.