ಶನಿವಾರಸಂತೆ, ಅ. ೨೨: ಸಮೀಪದ ಕೊಡ್ಲಿಪೇಟೆಯ ಜಾಮೀಯಾ ಮಸ್ಜಿದ್ ಹಾಗೂ ಇತ್ತೆಹಾದುಲ್ ಮುಸ್ಲಿಂಮೀನ್ ಸುನ್ನಿ ಮದ್ರಸ ವತಿಯಿಂದ ಪ್ರವಾದಿ ಜನ್ಮ ಮಾಸಾಚರಣೆ ಪ್ರಯುಕ್ತ ಗುರುವಾರ ಸಂಜೆ ಈದ್ ಮಿಲಾದ್ ಸಂದೇಶ ಜಾಥಾ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಜಾಮೀಯಾ ಮಸ್ಜಿದ್ ಮುಂಭಾಗದಿAದ ಆರಂಭವಾದ ಜಾಥಾ ಬಸ್ ನಿಲ್ದಾಣದ ಮೂಲಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕೆರಗನಹಳ್ಳಿ ಪೆಟ್ರೋಲ್ ಬಂಕ್‌ಗಾಗಿ ಶಾಂತಪುರ ಕಾನ್ವೆಂಟ್ ಜಂಕ್ಷನ್‌ವರೆಗೆ ಸಾಗಿ ಮಸ್ಜಿದ್‌ನಲ್ಲಿ ಸಮಾಪ್ತಿಯಾಯಿತು. ಸೈಕಲ್, ಬೈಕ್, ಆಟೋ, ಕಾರು ಇತ್ಯಾದಿ ಅಲಂಕೃತ ವಾಹನಗಳ ಜೊತೆ ಹ್ಯಾಂಡ್‌ಪೋಸ್ಟ್ ನೂರ್ ಯೂತ್ ಸಮಿತಿ ಯುವಕರ ತಂಡದ ದಫ್ ಪ್ರದರ್ಶನ ಜಾಥಾಗೆ ಮೆರುಗು ನೀಡಿ, ಸಾರ್ವಜನಿಕರನ್ನು ಆಕರ್ಷಿಸಿತು. ಕಾರ್ಯಕ್ರಮದ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಪ್ರಕೀರ್ತನೆಗಳ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನ ನಡೆಯಿತು.
ಮಸ್ಜಿದ್ ಧರ್ಮಗುರು ಮೌಲಾನ ಅಬ್ದುಲ್ ಮಜೀದ, ಮದ್ರಸ ಗುರು ಸುಹೈಲ್ ರಝಾ, ಆಡಳಿತ ಸಮಿತಿ ಅಧ್ಯಕ್ಷ ಮುಷರತ್ ರಝಾ, ಉಪಾಧ್ಯಕ್ಷ ಇರ್ಫಾನ್ ರಝಾ, ಕಾರ್ಯದರ್ಶಿ ಸಮೀವುಲ್ಲಾ, ಇತ್ತೆಹಾದುಲ್ ಮುಸ್ಲಿಂಮೀನ್ ಸುನ್ನಿ ಮದ್ರಸ ಸಮಿತಿ ಅಧ್ಯಕ್ಷ ಹಾಜಿ ಸಲಿಂ, ಸಿರಾಜ್, ಕಾರ್ಯದರ್ಶಿ ಬಿಲಾಲ್, ಸದಸ್ಯರಾದ ಇಫ್ತಿಕಾರ್, ಮೆಹಬೂಬ್, ಫರ್ಹಾನ, ಸಮದ್, ಸುಹೀಲ್, ಜಮೀಲ್, ಇದ್ರೀಸ್, ಇಮ್ರಾನ್, ಖಲೀಲ್, ಶಕೀಲ್, ಮುಷರತ್, ಫೈರೋಝ್, ಅನೀಸ್ ಹಾಗೂ ಯೂತ್ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.