ಶನಿವಾರಸAತೆ, ಅ. ೨೨: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಶನಿವಾರಸಂತೆ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭ ಸೋಮವಾರ ಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಜಯಭೇರಿ ಭಾರಿಸಲಿದೆ ಎಂದರು. ಶನಿವಾರಸಂತೆ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ರಂಗಸ್ವಾಮಿ, ದಲಿತ ಸಮಿತಿಯ ಜಿಲ್ಲಾ ಮುಖಂಡ ಜೆ.ಆರ್. ಪಾಲಾಕ್ಷ, ಜಿಲ್ಲಾ ಕಾಂಗ್ರೆಸ್ ಸದಸ್ಯರುಗಳಾದ ಪಿ.ಕೆ. ಗಂಗಾಧರ್, ಜಿ.ಎಂ. ಕಾಂತರಾಜ್, ಎಸ್.ಸಿ. ಶರತ್‌ಶೇಖರ್, ಮುಖಂಡರುಗಳಾದ ವೀರೇಂದ್ರ, ಸಂದೀಪ್, ಪಾಲಾಕ್ಷ, ರಂಗಸ್ವಾಮಿ, ಮಲ್ಲೇಶ್, ಇಬ್ರಾಹಿಂ, ಅಕ್ಮಲ್‌ಪಾಶ, ಮಂಜುನಾಥ, ಅಬ್ಬಾಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.