ಕಣಿವೆ, ಅ. ೨೩: ಕುಶಾಲನಗರ ತಾಲೂಕು ಆಡಳಿತದ ವತಿಯಿಂದ ನವೆಂಬರ್ ೧ ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬAಧ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಕುಶಾಲನಗರದ ಸಂಘ-ಸAಸ್ಥೆಗಳ ಪ್ರಮುಖರನ್ನು ಒಳಗೊಂಡ ಸಭೆ ನಡೆಯಿತು.
ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಾಲಯದ ಬಳಿಯಿಂದ ಮುಖ್ಯ ರಸ್ತೆಯಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿಯ ಅಲಂಕೃತ ಭಾವಚಿತ್ರದೊಂದಿಗೆ ಬೆಳಿಗ್ಗೆ ೮.೩೦ ಗಂಟೆಗೆ ಮೆರವಣಿಗೆಯಲ್ಲಿ ಸಾಗಿ ೯.೩೦ ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಬಳಿ ಬರುವುದು. ಬಳಿಕ ಶಾಲಾ ಮೈದಾನದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸುವುದು. ನಂತರ ಸಂಪನ್ಮೂಲ ವ್ಯಕ್ತಿಯಿಂದ ನಾಡಹಬ್ಬದ ಮಹತ್ವದ ಕುರಿತು ಭಾಷಣ, ಬಳಿಕ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸುವುದು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮೈದಾನದಲ್ಲಿ ಶಾಲಾ ಮಕ್ಕಳು, ಎನ್ಸಿಸಿ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಒಳಗೊಂಡು ಪಥಸಂಚಲನ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಆರ್ಥಿಕ ಸಂಪ ನ್ಮೂಲದ ಅಲಭ್ಯತೆಯ ಕಾರಣದಿಂದ ಸ್ಥಳೀಯರು, ಸಾರ್ವಜನಿಕರು ಅಥವಾ ಸಂಘಟನೆಗಳ ಸಹಕಾರಕ್ಕಾಗಿ ತಹಶೀಲ್ದಾರ್ ಪ್ರಕಾಶ್ ಮನವಿ ಮಾಡಿದರು.
ಕನ್ನಡ ರಾಜ್ಯೋತ್ಸವ ಆಚರಣೆಗೆ ಸರ್ಕಾರದಿಂದ ಹಣಕಾಸು ನೆರವು ಬಾರದ ಬಗ್ಗೆ ಕರವೇ ಅಧ್ಯಕ್ಷ ವೆಂಕಟೇಶ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯೋತ್ಸವದಂದು ಮೆರವಣಿಗೆ ಯಲ್ಲಿ ವಿವಿಧ ಕಲಾ ತಂಡಗಳಿರಬೇಕು. ಹಾಗಾಗಿ ವಿವಿಧ ಇಲಾಖೆಯವರು ಆಸಕ್ತಿ ವಹಿಸಿ ಕಲಾ ತಂಡಗಳ ಸಹಕಾರಕ್ಕೆ ತಹಶೀಲ್ದಾರ್ ಪ್ರಕಾಶ್ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಈ ಸಂದರ್ಭ ಮಾತನಾಡಿ, ತಾಲೂಕು ಆಡಳಿತದಿಂದ ನಡೆಸುವ ರಾಜ್ಯೋತ್ಸವದ ಅಂಗವಾಗಿ ಕುಶಾಲನಗರ ಪಟ್ಟಣದಾದ್ಯಂತ ಇರುವ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕಗಳು ಇರಬೇಕು.
ಕಾರ್ಯಕ್ರಮದ ಸಾಂಸ್ಕೃತಿಕ ವೇದಿಕೆಯಲ್ಲಿ ಕನ್ನಡ ನಾಡು ನುಡಿ ಬಿಂಬಿಸುವ ಕನ್ನಡ ಗೀತೆಗಳಿಗಷ್ಟೇ ಪ್ರಾಧಾನ್ಯತೆ ಇರಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಕೈಯಲ್ಲೂ ಕನ್ನಡ ಧ್ವಜ ರಾರಾಜಿಸಬೇಕು ಎಂದು ಮನವಿ ಮಾಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಉಪಾಧ್ಯಕ್ಷೆ ಸುರಯ್ಯಾಭಾನು ಇದ್ದರು.
ಕಂದಾಯ ಇಲಾಖೆಯ ಉಪತಹಶೀಲ್ದಾರ್ ಮಧುಸೂದನ್, ಕಂದಾಯ ಅಧಿಕಾರಿ ಸಂತೋಷ್, ಜಲಮಂಡಳಿ ಇಂಜಿನಿಯರ್ ಆನಂದ್, ಉಪ ಖಜಾನಾ ಅಧಿಕಾರಿ ಜಯಕುಮಾರ್, ಕೃಷಿ ಅಧಿಕಾರಿ ಸ್ವರ್ಣ, ಆಹಾರ ಅಧಿಕಾರಿ ಸ್ವಾತಿ, ಎಪಿಸಿಎಂಎಸ್ ಅಧ್ಯಕ್ಷ ಕುಮಾರಪ್ಪ, ವಿವಿಧ ಸಂಘಟನೆಗಳ ಪ್ರಮುಖರಾದ ಕೃಷ್ಣ, ಅಣ್ಣಯ್ಯ, ಜಗದೀಶ್, ಕೆ.ಬಿ. ರಾಜು ಮೊದಲಾದವರಿದ್ದರು.