ಸೋಮವಾರಪೇಟೆ, ಅ. ೨೩: ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಅರೆಯೂರು ನಿವಾಸಿ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಕಾಶ್ ಅವರಿಗೆ ಪಂಚಾಯಿತಿ ವತಿಯಿಂದ ಧನ ಸಹಾಯ ನೀಡಲಾಯಿತು. ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ಪ್ರಕಾಶ್ ಅವರ ಹೆಚ್ಚಿನ ಚಿಕಿತ್ಸೆಗಾಗಿ ಪಂಚಾಯಿತಿ ನಿಧಿಯಿಂದ ರೂ. ೫ ಸಾವಿರ ಒದಗಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಸದಸ್ಯರಾದ ರಾಮ್‌ದೇವ್, ಪ್ರಕಾಶ್, ಸಂಭ್ರಮ್, ಅಜಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅನಾರೋಗ್ಯ ಪೀಡಿತರಾಗಿರುವ ಪ್ರಕಾಶ್ ಅವರಿಗೆ ಅಬ್ಬೂರುಕಟ್ಟೆ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿ ಸದಸ್ಯ ರವಿಕುಮಾರ್ ಅವರು ಸಾರ್ವಜನಿಕರಿಂದ ಸಂಗ್ರಹಿಸಿದ ರೂ. ೫ ಸಾವಿರ ಹಣವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದರು.