ಮಡಿಕೇರಿ, ಅ. ೨೨: ತಾ.೨೫ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಯಿAದ ೧೨ ಗಂಟೆಯವರೆಗೆ ಭಕ್ತಾದಿಗಳಿಗೆ ನಿತ್ಯ ಸೇವೆಗೆ ಅವಕಾಶವಿರುತ್ತದೆ. ನಂತರ ಸಂಜೆ ಯಾವುದೇ ಸೇವೆಗಳು ಇರುವುದಿಲ್ಲ.
ತಾ. ೨೬ ರಂದು ಬೆಳಿಗ್ಗೆ ೭.೩೦ ಗಂಟೆಯಿAದ ೧೧.೩೦ ರವರೆಗೆ ಗ್ರಹಣ ಶಾಂತಿ ಸಂಕಲ್ಪ ಪ್ರಾರಂಭ, ೧೨ ಗಂಟೆಗೆ ಮಹಾಪೂಜೆ ನಂತರ ಗ್ರಹಣ ಶಾಂತಿ ಪ್ರಸಾದ ವಿತರಣೆ ನಡೆಯಲಿದೆÀ ಎಂದು ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರು ತಿಳಿಸಿದ್ದಾರೆ.