ಚೆಯ್ಯಂಡಾಣೆ, ಅ. ೨೩: ಕೊಡಗು ಜಿಲ್ಲೆಯ ಅನಿವಾಸಿಗಳ ಸಂಘಟನೆ ಯಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ವತಿಯಿಂದ ದುಬೈ ದೇರಾ ಪಾರ್ಲ್ ಕ್ರೀಕ್ ಹೊಟೇಲ್ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿAದ ಈದ್ ಮಿಲಾದ್ ನಡೆಯಿತು.

ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ತಂಘಳ್ ದುಃಆಕ್ಕೆ ನೇತೃತ್ವ ಮತ್ತು ಆಶೀರ್ವಚನಕ್ಕೆ ಮುಂದಾಳತ್ವ ನೀಡಿ ವೆಲ್ಫೇರ್ ಸಂಘಟನೆಯು ನಡೆಸುತ್ತಿರುವ ಸಾಮೂಹಿಕ ವಿವಾಹ, ನೊಂದವರ ಕಣ್ಣೀರೊರೆಸುವ ಕಾರ್ಯಕ್ರಮ ಕೊಡಗಿನಾದ್ಯಂತ ವ್ಯಾಪಿಸಿದ್ದು ಶ್ಲಾಘನೀಯ. ಇಂತಹ ಸಂಘಟನೆ ಯನ್ನು ಪ್ರೋತ್ಸಾಹಿಸು ವಂತಾಗಬೇಕೆAದು ಕರೆ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹ್ರೆöÊನ್ ಕೊಡಗು ಸುನ್ನೀ ವೆಲ್ಫೇರ್ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೊಡಗು ಸುನ್ನೀ ವೆಲ್ಫೇರ್ ಯುಎಇ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಕೊಡಗು ಸುನ್ನಿ ವೆಲ್ಫೇರ್ ಕಾರ್ಯಚಟುವಟಿಕೆಯ ಬಗ್ಗೆ ಮಾತನಾಡಿದರು. ಕೊಡಗು ಜಿಲ್ಲೆಯಿಂದ ದುಬೈಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೊಯಿದ್ದೀನ್ ಕುಟ್ಟಿ ಹಾಜಿ ಕೊಳಕೇರಿ, ಅಬ್ದುಲ್ ರಹ್ಮಾನ್ ಹಾಜಿ ನಾಪೋಕ್ಲು, ಹುಸೈನ್ ಹಾಜಿ ಕುಂಜಿಲ, ಹುಸೈನ್ ಸಖಾಫಿ ಎಮ್ಮೆಮಾಡು ರವರನ್ನು ಕಾರ್ಯಕ್ರಮದಲ್ಲಿ ವೆಲ್ಫೇರ್ ವತಿಯಿಂದ ಸನ್ಮಾನಿಸಲಾಯಿತು.

ಕೊಡಗಿನ ಯುಎಇಯಲ್ಲಿ ನೆಲೆಸಿರುವ ೪೦೦ಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದುಬೈಯಲ್ಲಿ ನೆಲೆಸಿರುವ ಅನಿವಾಸಿ ಕೊಡಗಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ವೇದಿಕೆಯಲ್ಲಿ ವೆಲ್ಫೇರ್ ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಇಬ್ರಾಹಿಂ ಮುಸ್ಲಿಯಾರ್ ಕುಂಜಿಲ, ಅಹ್ಮದ್ ಚಾಮಿಯಾಲ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಿಯಾಝ್ ಕೊಂಡAಗೇರಿ, ಸ್ವಾಗತವನ್ನು ಸ್ವಾಗತ ಸಮಿತಿಯ ಕನ್ವೀನರ್ ಇಸ್ಮಾಯಿಲ್ ಮೂರ್ನಾಡು ನಡೆಸಿದರೆ ವಂದನೆಯನ್ನು ಮುಜೀಬ್ ಕಡಂಗ ನಿರ್ವಹಿಸಿದರು. - ಅಶ್ರಫ್