ಕಣಿವೆ, ಅ. ೨೩: ಕೂಡ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ ದೀಪಾವಳಿ ಕಾರ್ಯಕ್ರಮ ಜರುಗಿತು.
ಶಾಲಾ ಆವರಣದಲ್ಲಿ ಶಾಲಾ ಮಕ್ಕಳೇ ಸೇರಿ ಪರಿಸರವನ್ನು ಶುಚಿಗೊಳಿಸಿದರು. ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದರು. ಆ ರಂಗೋಲಿಗಳ ನಡುವೆ ಮನೆಯಿಂದ ತಂದಿದ್ದ ಮಣ್ಣಿನ ಹಣತೆಗಳಿಗೆ ಭಕ್ತಿಯ ಎಣ್ಣೆ ಸುರಿದು ಭಾವೈಕ್ಯತೆಯ ಬತ್ತಿಗಳನ್ನು ಹಚ್ಚಿ ನಮ್ಮನ್ನೆಲ್ಲಾ ಹೊತ್ತು ನಿಂತ ಸಹನಾ ಧರಿತ್ರಿ ಭೂಮಿ ತಾಯಿಗೆ ಬೆಳಗಿದರು.
ಈ ಸಂದರ್ಭ ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೂಡ್ಲೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಶಾಲಾ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿಗಳಿಗೆ ಪಟಾಕಿ ಸಿಡಿಸು ವುದರಿಂದ ಪರಿಸರದ ಸಿಬ್ಬಂದಿಗಳಿಗೆ ಪಟಾಕಿ ಸಿಡಿಸು ವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಹಾಗೆಯೇ ಪಟಾಕಿ ತ್ಯಜಿಸಿ ಹಣತೆ ಹಚ್ವುವ ಮೂಲಕ ಪರಿಸರ, ಪ್ರಾಣಿ ಪಕ್ಷಿಗಳ ಒಳಿತು ಕಾಯುವ ಬಗ್ಗೆ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಹೆಚ್.ಎಸ್. ಸುಜಾತ, ಸಹ ಶಿಕ್ಷಕರಾದ ಭಾರತಿ, ಭೋಜಮ್ಮ, ಉಷಾ, ಗೀತಾ ರಾಣಿ, ರಶ್ಮಿ ಇದ್ದರು.