ಮಡಿಕೇರಿ, ಅ. ೨೨: ಹಿಂದೂ ಮಲಯಾಳಿ ಸಂಘದ ವತಿಯಿಂದ ನವೆಂಬರ್ ೧ರಂದು ನಡೆಯಲಿರುವ ಓಣಾಷೋಷಂ-ಓಣA ಸದ್ಯ ೨೦೨೨ರ ಪ್ರಯುಕ್ತ ತಾ. ೨೩ರಂದು (ಇಂದು) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ಸದಸ್ಯರು ಹಾಗೂ ಕುಟುಂಬದವರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೯ ಗಂಟೆಗೆ ಉದ್ಘಾಟನೆಗೆ ಕಾಫಿ ಬೆಳೆಗಾರರಾದ ಗೌತಮ್, ಪ್ರಮೋದ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುರುಷರಿಗೆ ಕ್ರಿಕೆಟ್ ಪಂದ್ಯಾಟ, ಹಗ್ಗ ಜಗ್ಗಾಟ, ಗೋಣಿ ಚೀಲದ ಓಟ, ಕಾಲು ಕಟ್ಟಿ ಓಟ, ಮ್ಯೂಸಿಕಲ್ ಚೇರ್, ಮಡಿಕೆ ಒಡೆಯುವುದು, ವೇಗದ ನಡಿಗೆ (೬೦ ವರ್ಷ ಮೇಲ್ಪಟ್ಟವರಿಗೆ).
ಮಹಿಳೆಯರಿಗೆ ನಿಂಬೆ- ಚಮಚ ಓಟ (ಐemoಟಿ & Sಠಿooಟಿ), ಹಗ್ಗ ಜಗ್ಗಾಟ, ಸೂಜಿ ನೂಲಿನ ಓಟ, ಮ್ಯೂಸಿಕಲ್ ಚೇರ್, ಬಲೂನ್ ಬ್ಲಾಸ್ಟ್, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ, ಮಡಿಕೆ ಒಡೆಯುವುದು, ವೇಗದ ನಡಿಗೆ (೬೦ ವರ್ಷ ಮೇಲ್ಪಟ್ಟವರಿಗೆ).
ಮಕ್ಕಳಿಗೆ ಕಾಳು ಹೆಕ್ಕುವುದು - ಅಂಗನವಾಡಿ ಮಕ್ಕಳಿಗೆ (೧ ರಿಂದ ೪ ವರ್ಷದ ಮಕ್ಕಳಿಗೆ), ಕಾಳು ಹೆಕ್ಕುವುದು- (೫ ರಿಂದ ೬ ವರ್ಷದ ಮಕ್ಕಳಿಗೆ), ಚಿತ್ರಕಲೆ ಸ್ಪರ್ಧೆ (ವಿಷಯ:-ಪೂಕಳಂ (ಹೂವಿನ ರಂಗೋಲಿ) (೧ನೇ ತರಗತಿಯಿಂದ- ೪ನೇ ತರಗತಿಯ ಮಕ್ಕಳಿಗೆ), ಚಿತ್ರಕಲೆ ಸ್ಪರ್ಧೆ (ವಿಷಯ:-ಮಾವೇಲಿ (ಮಹಾ ಬಲಿ ಚಕ್ರವರ್ತಿ) (೫ನೇ ತರಗತಿಯಿಂದ - ೭ನೇ ತರಗತಿಯ ಮಕ್ಕಳಿಗೆ), ಬಕೆಟ್ಗೆ ಚಂಡು ಹಾಕುವುದು (೧ರಿಂದ ೭ನೇ ತರಗತಿಯ ಮಕ್ಕಳಿಗೆ), ಗೋಣಿ ಚೀಲದ ಓಟ (೮ನೇ ತರಗತಿಯಿಂದ ೧೨ಣh oಡಿ ೨ಟಿಜ PUಅ ಮಕ್ಕಳಿಗೆ) ನಡೆಯಲಿದೆ. ಕ್ರಿಕೆಟ್ನ ಪ್ರದರ್ಶನ ಪಂದ್ಯಾಟ ಕೊಡಗು ಪತ್ರಕರ್ತರ ಸಂಘ ಹಾಗೂ ಮಲಯಾಳಿ ಸಂಘದ ತಂಡಗಳ ನಡುವೆ ನಡೆಯಲಿದೆ.