ನಾಪೋಕ್ಲು, ಅ. ೨೨: ಸ್ಥಳೀಯ ಚೆರಿಯಪರಂಬುವಿನ ಯುವಕನೋರ್ವ ಕೇರಳದ ಮಾನಂದವಾಡಿಯ ಬಾವಲಿ ಎಂಬಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಚೆರಿಯಪರಂಬು ನಿವಾಸಿ ಎಂ.ಎA. ಹಂಸ ಎಂಬವರ ಪುತ್ರ ಸಂಶುದ್ದೀನ್ (೨೮) ೩ ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಪಿಕಪ್ ವಾಹನದಲ್ಲಿ ತರಕಾರಿ ತರಲೆಂದು ಕೇರಳದ ಮಾನಂದವಾಡಿಗೆ ತೆರಳಿದ್ದ ಎನ್ನಲಾಗಿದೆ. ಆದರೆ ಶನಿವಾರ ಸಂಶುದ್ದೀನ್‌ನ ಮೃತದೇಹ ಕರ್ನಾಟಕ ಕೇರಳದ ಗಡಿ ಭಾಗವಾಗಿರುವ ಮಾನಂದವಾಡಿಯ ಬಾವಲಿ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಾನಂದವಾಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.