ನಾಪೋಕ್ಲು, ಅ. 21: ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ಮೂರು ಬೈಕ್ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆಗಸ್ಟ್ ಒಂದರಂದು ಪಾರಾಣೆ ಗ್ರಾಮದಲ್ಲಿ ಬೈಕ್ ಕಳ್ಳತನ ಆಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಬೈಕ್ ಸೇರಿದಂತೆ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಬೈಕ್ಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಕುಂಜಿಲ - ಕಕ್ಕಬೆ ಗ್ರಾಮದ ಮೋಹನ್ ರಾಜ್ (28) ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಂದರ್ಭ ನಾಪೋಕ್ಲು ಪೊಲೀಸ್ ಠಾಣಾ ಪಿಎಸ್ಐ ಎಂ.ಕೆ. ಸದಾಶಿವ, ಪಿಎಸ್ಐ ಹೆಚ್.ಎಸ್. ಪ್ರಮೋದ್, ಎಎಸ್ಐ ಹೆಚ್.ಜೆ. ಮಹೇಶ್, ಎಎಸ್ಐ ಗೋಪಾಲಕೃಷ್ಣ, ಸಿಬ್ಬಂದಿ ಎಂ.ಆರ್. ರವಿಕುಮಾರ್, ಸಾಜನ್, ರಾಮಕೃಷ್ಣ, ಮಧುಸೂದನ್, ಎನ್. ನವೀನ್, ಶರತ್ಕುಮಾರ್, ಬಸವರಾಜು, ಪಂಚಲಿಂಗಪ್ಪ ಸತ್ತಿಗೇರಿ, ಗಿರೀಶ್, ಶಿವಪ್ರಸಾದ್ ಹಾಗೂ ಸಿಡಿಆರ್ ವಿಭಾಗದ ಗಿರೀಶ್, ರಾಜೇಶ್, ಪ್ರವೀಣ್ ಇದ್ದರು.