ಗೋಣಿಕೊಪ್ಪ ವರದಿ, ಅ. 21: ಲಯನ್ಸ್ ಕ್ಲಬ್ ಸದಸ್ಯರಿಗೆ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಒಳಾಂಗಣ ಪಂದ್ಯಾಟ ಇಲ್ಲಿನ ಲಯನ್ಸ್ ಶಾಲಾ ಮೈದಾನದಲ್ಲಿ ನಡೆಯಿತು.

ಗೋಣಿಕೊಪ್ಪ, ಮೂರ್ನಾಡು, ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ನಾಪೆÇೀಕ್ಲು, ಪಿರಿಯಾಪಟ್ಟಣ ಕ್ಲಬ್ ಸದಸ್ಯರು ಪಾಲ್ಗೊಂಡರು. ಪುರುಷರು, ಮಹಿಳೆಯರ ಹಾಗೂ ಮಿಕ್ಸೆಡ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.

ವಿಜೇತರು: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಇಂದಿರಾ ಅಪ್ಪಣ್ಣ (ಮೂರ್ನಾಡು)-ಶೈಲಾ ಭೀಮಯ್ಯ (ನಾಪೆÇೀಕ್ಲು) ಜೋಡಿ ಪ್ರಥಮ, ವಿದ್ಯಾ (ಸಿದ್ದಾಪುರ)-ರಶ್ಮಿ ಅಯ್ಯಪ್ಪ (ಗೋಣಿಕೊಪ್ಪ) ಜೋಡಿ ದ್ವಿತೀಯ, ಪುರುಷರ ವಿಭಾಗದಲ್ಲಿ ಪಿ.ಎಂ. ಅಪ್ಪಣ್ಣ (ಮೂರ್ನಾಡು)-ವಿನೋದ್ (ಪಿರಿಯಾಪಟ್ಟಣ) ಪ್ರಥಮ, ಎ.ಪಿ. ಸುಬ್ರಮಣಿ (ವೀರಾಜಪೇಟೆ)-ಸ್ಮರಣ್ ಸುಭಾಷ್ (ಗೋಣಿಕೊಪ್ಪ) ದ್ವಿತೀಯ, ಮಿಕ್ಸೆಡ್ ವಿಭಾಗದಲ್ಲಿ ವಿಶಾಲ್-ವಿದ್ಯಾ (ಸಿದ್ದಾಪುರ) ಪ್ರಥಮ, ಧನ್ಯ-ರಶ್ಮಿ ಅಯ್ಯಪ್ಪ (ಗೋಣಿಕೊಪ್ಪ) ದ್ವಿತೀಯ ಸ್ಥಾನ ಪಡೆದರು.