ಮಡಿಕೇರಿ, ಅ. ೨೨: ಮಡಿಕೇರಿಯ ಬ್ಲಾಸಂ ಶಾಲೆಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ನಗರದ ಬ್ಲಾಸಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮಕ್ಕಳಿಗೆ ಓದುವ ಹವ್ಯಾಸವನ್ನು ಉತ್ತೇಜಿಸಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಕ್ಲಬ್ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಅನುಸೂಯ ಮುಖಾಂತರ ಕಥೆಗಳು ಇರುವ ೧೦೦ ಪುಸ್ತಕಗಳು ಮತ್ತು ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಮೊಬೈಲ್ ನೋಡುವ ಹವ್ಯಾಸದಿಂದ ಹೊರಬಂದು ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ಡಾ. ರೇಣುಕಾ ಸುಧಾಕರ್ ಸಲಹೆ ನೀಡಿದರು.
ಇನ್ನರ್ ವೀಲ್ ಕಾರ್ಯದರ್ಶಿ ಲಲಿತಾ ರಾಘವನ್, ನಿರ್ದೇಶಕಿಯರಾದ ಪವಿತ್ರ, ಲತಾ ಚೆಂಗಪ್ಪ, ಕನ್ನು ದೇವರಾಜ್, ದಿವ್ಯಾ ಮುತ್ತಣ್ಣ, ರಾಧಿಕಾ ವಿಶ್ವನಾಥ್ ಹಾಜರಿದ್ದರು. ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.