ಕಣಿವೆ, ಅ. ೨೨: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಲಾಲ್ ಮುಕ್ತ ದೀಪಾವಳಿ ಆಚರಣೆ ಹಾಗೂ ತಿನ್ನುವ ಆಹಾರದಲ್ಲಿ ಹಲಾಲ್ ಸರ್ಟಿಫಿಕೇಟಿಕೇಶನ್ ಇರಬಾರದು ಎಂದು ಆಗ್ರಹಿಸಿ ಕುಶಾಲನಗರದ ತಹಶೀಲ್ದಾರ್ ಕಚೇರಿ ಬಳಿ ಕಂದಾಯ ಅಧಿಕಾರಿ ಸಂತೋಷ್ ಅವರಿಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ ನಾಯಕ್, ಬಿ.ಪಿ.ಕೃಷ್ಣಮೂರ್ತಿ, ಶ್ರೀನಾಥ್, ಪ್ರಸಾದ್, ಉಮಾ ಶ್ರೀನಾಥ್, ಲಕ್ಷಿö್ಮ ಹರೀಶ್, ಪ್ರಸನ್ನ ಮೊದಲಾದವರಿದ್ದರು.