ಕೂಡಿಗೆ, ಅ. ೨೨: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಪಿ. ಸುರೇಶ್ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂದರ್ಭ ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ರಾಜು, ಪ್ರಕಾಶ್, ಕೃಷ್ಣ, ವಿಷಕಂಠ, ಗಣೇಶ್, ವಿಜಯ ಕುಮಾರ್, ವನಜಾಕ್ಷಿ, ಎಸ್ ಎಸ್ ರಾಜಪ್ಪ, ಉಮೇಶ್ ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘ ಅಧಿಕಾರಿ ಮೋಹನ್ ಕಾರ್ಯ ನಿರ್ವಹಿಸಿದರು. ಒಕ್ಕೂಟದ ಪರಿವೀಕ್ಷಕ ಅಭಿಲಾಷ್ ಸೇರಿದಂತೆ ಸಂಘದ ಕಾರ್ಯದರ್ಶಿ ಎಸ್.ಎಂ. ಹರೀಶ್ ಹಾಜರಿದ್ದರು.