ಸೋಮವಾರಪೇಟೆ, ಅ. ೨೨ : ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ದೂರದಿಂದ ನೋಡಿದರೆ ಖಾಸಗಿ ನರ್ಸಿಂಗ್ ಹೋಂ ನಂತೆ ಕಾಣುತ್ತದೆ. ಉತ್ತಮ ಕಟ್ಟಡವನ್ನು ಹೊಂದಿದೆ. ಸುಣ್ಣಬಣ್ಣದಿಂದ ಮಿರಮಿರ ಮಿಂಚುತ್ತಿದೆ. ಆದರೆ ಆಧುನಿಕ ವೈದ್ಯಕೀಯ ಉಪಕರಣಗಳು ಮಾತ್ರ ರೂಂ ನಲ್ಲಿ ತುಕ್ಕು ಹಿಡಿಯುತ್ತಿವೆ. ಉಪಕರಣಗಳನ್ನು ಉಪಯೋಗಿಸಲು ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳೇ ಇಲ್ಲ.
ತಾಲೂಕಿನ ಎಲ್ಲಾ ವರ್ಗದ ರೋಗಿಗಳಿಗೆ ಏಕೈಕ ಆಸರೆಯಾಗಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಅತೀ ಅಗತ್ಯವಾಗಿ ಇರಬೇಕಾದ ವೈದ್ಯರುಗಳು ಹಾಗೂ ಉಪಕರಣಗಳ ಕೊರತೆಯಿಂದಲೇ ನಲುಗುತ್ತಿದೆ. ಇರುವ ವೈದ್ಯರು ಶಕ್ತಿ ಮೀರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅತೀ ಮುಖ್ಯವಾಗಿ ಈ ಆಸ್ಪತ್ರೆಗೆ ಶಸ್ತçಚಿಕಿತ್ಸಕರು/ಆಡಳಿತ ವೈದ್ಯಾಧಿಕಾರಿಗಳೇ ಇಲ್ಲ. ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ರೇಡಿಯಾಲಜಿಸ್ಟ್, ಕ್ಯಾಶುವಾಲಿಟಿ ಮೆಡಿಕಲ್ ಆಫೀಸರ್‌ಗಳ ಹುದ್ದೆಗಳು ಈ ಆಸ್ಪತ್ರೆಗೆ ಮಂಜೂರಾಗಿದ್ದರೂ ಅಂತಹ ವೈದ್ಯರುಗಳ ನೇಮಕಾತಿ ಆಗಿಲ್ಲ.
ಇರುವ ವೈದ್ಯರುಗಳು ತಮ್ಮ ಶಕ್ತಿಮೀರಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇರುವ ವೈದ್ಯರಿಗೆ ಕರ್ತವ್ಯದ ಭಾರವೂ ಅಧಿಕವಾಗುತ್ತಿದೆ. ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಿಲ್ಲದ ಹಿನ್ನೆಲೆ ಸಣ್ಣಪುಟ್ಟ ಶಸ್ತç ಚಿಕಿತ್ಸೆಗಳನ್ನು ಹೊರತುಪಡಿಸಿ ಇನ್ನಿತರ ಶಸ್ತç ಚಿಕಿತ್ಸೆಗಳಿಗೆ ದೂರದ ಮೈಸೂರು, ಮಂಗಳೂರು, ಬೆಂಗಳೂರು, ಹಾಸನದ ಆಸ್ಪತ್ರೆಗೆ ತೆರಳಬೇಕಿದೆ. ಸಣ್ಣಪುಟ್ಟ ಅವಘಡಗಳಾದರೆ ಮಡಿಕೇರಿಗೆ ಶಿಫಾರಸ್ಸು ಮಾಡುವುದು ಮಾಮೂಲಾಗಿದೆ. ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯನ್ನು ಇನ್ನಷ್ಟು ಸುಧಾರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ಕೃಷಿಕರು, ಕೂಲಿ ಕಾರ್ಮಿಕರು, ಮಕ್ಕಳು ಸೇರಿದಂತೆ ದಿನವೊಂದಕ್ಕೆ ಸರಾಸರಿ ೩೦೦ರಷ್ಟು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಡಿಯಲ್ಲಿ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಒಳಪಟ್ಟಿದ್ದು, ಈ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮುಂದುವರೆದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ೧೨೦ ಹಾಸಿಗೆಗಳನ್ನು ಒಳರೋಗಿಗಳಿಗೆ ಕಲ್ಪಿಸಲಾಗಿದೆ. ಎಕ್ಸರೇ, ಇಸಿಜಿ ಚಾಲೂ ಸ್ಥಿತಿಯಲ್ಲಿದ್ದು, ಸ್ಕಾö್ಯನಿಂಗ್‌ಗಳಿಗಾಗಿ ಮಡಿಕೇರಿ ಅಥವಾ ಹಾಸನಕ್ಕೆ ತೆರಳಬೇಕಿದೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತçಚಿಕಿತ್ಸಾ ಘಟಕವಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಜಿಲ್ಲೆಯ ಇತರ ತಾಲೂಕು ಆಸ್ಪತ್ರೆಗಳಿಗೆ ಹೋಲಿಸಿದರೆ ಸೋಮವಾರಪೇಟೆ ಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ, ವೈದ್ಯರಿಲ್ಲ, ಉಪಕರಣಗಳಿಲ್ಲ.., ಈ ತಾರತಮ್ಯವೇಕೆ ಎಂಬುದೇ ಪ್ರಶ್ನೆ.
ಕಳೆದ ಐದು ವರ್ಷಗಳ ಹಿಂದೆಯೇ ರಕ್ತ ನಿಧಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆಯೂ ದೊರಕಿತ್ತು. ಆದರೆ ತರಬೇತಿಗೆ ನಿಯೋಜಿಸಲು ಎಂಬಿಬಿಎಸ್ ವೈದ್ಯರಿಲ್ಲ. ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸಕರ ಹುದ್ದೆ ಖಾಲಿ ಇದೆ. ಇದರೊಂದಿಗೆ ಖಾಯಂ ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ರೇಡಿಯಾಲಜಿಸ್ಟ್, ಮೆಡಿಕಲ್ ಆಫೀರ‍್ಸ್ ಹುದ್ದೆಗಳು ಖಾಲಿ ಉಳಿದಿವೆ.
ಬಹುಮುಖ್ಯವಾಗಿ ಅರವಳಿಕೆ ತಜ್ಞರು ಇಲ್ಲದೇ ಇರುವುದರಿಂದ ಶಸ್ತç ಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ತುರ್ತು ಸಂದರ್ಭಗಳಲ್ಲಿ ಮಡಿಕೇರಿ, ಮೈಸೂರು ಹಾಗೂ ಮಂಗಳೂರಿಗೆ ಶಿಫಾರಸ್ಸು ಮಾಡಬೇಕಾದ ಅನಿವಾರ್ಯತೆ ಇಲ್ಲಿನ ವೈದ್ಯರಿಗೆ ಎದುರಾಗಿದೆ.
ಉಳಿದಂತೆ ಜನರಲ್ ಸರ್ಜನ್ ಆಗಿ ಡಾ. ಸತೀಶ್‌ಕುಮಾರ್, ಮೂಳೆ ತಜ್ಞರಾಗಿ ಡಾ. ಉಲ್ಲಾಸ್, ನೇತ್ರ ತಜ್ಞರಾಗಿ ಡಾ. ನವೀನ್‌ಕುಮಾರ್, ಇಎನ್‌ಟಿ ತಜ್ಞರಾಗಿ ಡಾ. ಮಂಜುಳಾ, ಸ್ತಿçÃರೋಗ ತಜ್ಞರಾಗಿ ಡಾ. ಶಿವಪ್ರಸಾದ್, ಜನರಲ್ ಮೆಡಿಸಿನ್ ತಜ್ಞರಾಗಿ ಡಾ. ಕಿರಣ್, ದಂತ ವೈದ್ಯೆ ಡಾ. ಅಫ್ರಿನ್ ಅವರುಗಳು ಕರ್ತವ್ಯದಲ್ಲಿದ್ದಾರೆ.
ಇನ್ನು ಒಂದು ವರ್ಷಗಳ ಕಡ್ಡಾಯ ಗ್ರಾಮೀಣ ಸೇವೆ ನಿಯಮಕ್ಕೆ ಒಳಪಟ್ಟು ಮೂಳೆ ತಜ್ಞರಾಗಿ ಡಾ. ಮರ್ಸಿ ಸಬಾಸ್ಟಿನ್,
(ಮೊದಲ ಪುಟದಿಂದ) ಡಾ. ಪ್ರವೀಣ್ ಅವರುಗಳು ಸೇವೆಯಲ್ಲಿದ್ದು, ಹೆಚ್ಚುವರಿಯಾಗಿ ವಾರದ ಸೋಮವಾರ ಮತ್ತು ಗುರುವಾರ ಡಾ. ರವಿಕಿರಣ್, ಬುಧವಾರ ಮತ್ತು ಶುಕ್ರವಾರ ಡಾ. ಕುಮಾರ್ ಅವರುಗಳು ಆಗಮಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಆದರೂ ಸಹ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಮರ್ಪಕ ನೆರವು ಒದಗುತ್ತಿಲ್ಲ. ಸ್ಕಾö್ಯನಿಂಗ್ ಘಟಕ ಇಲ್ಲದಿರುವುದರಿಂದ ಮಡಿಕೇರಿಗೆ ತೆರಳುವುದು ಅನಿವಾರ್ಯವಾಗಿದೆ. ಸ್ಕಾö್ಯನಿಂಗ್ ಯಂತ್ರವಿದ್ದರೂ ವೈದ್ಯರಿಲ್ಲ. ಸಣ್ಣ ನೋವಿದ್ದರೂ ಮಡಿಕೇರಿಗೆ ತೆರಳಬೇಕಿದೆ. ಐಸಿಯು ಯೂನಿಟ್‌ಗೆ ಪರಿಕರಗಳಿದ್ದರೂ ವೈದ್ಯರಿಲ್ಲ. ದೇಹದಲ್ಲಿ ಗಂಟು, ಸಿಸೇರಿಯನ್, ಅಪೆಂಡಿಕ್ಸ್, ಹರ್ನಿಯಾಗಳಂತಹ ಖಾಯಿಲೆಗಳಿಗೆ ಮಾತ್ರ ಇಲ್ಲಿ ಶಸ್ತçಚಿಕಿತ್ಸೆ ಮಾಡುತ್ತಿದ್ದು, ಉಳಿದ ಖಾಯಿಲೆಗಳಿಗೆ ಹೊರ ಭಾಗದ ಆಸ್ಪತ್ರೆಗಳ ಬಾಗಿಲು ಬಡಿಯಬೇಕಿದೆ. ಡಯಾಲಿಸಿಸ್ ಘಟಕದಲ್ಲಿ ದಿನಕ್ಕೆ ಮೂರು ಶಿಫ್ಟ್ನಂತೆ ೧೫ ಮಂದಿ ಚಿಕಿತ್ಸೆಗೆ ಒಳಪಡುತ್ತಿದ್ದಾರೆ.
ಒಟ್ಟಾರೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ಸುಧಾರಣೆಯತ್ತ ಸರ್ಕಾರ ಗಮನ ಹರಿಸಬೇಕಿದೆ. ಐಸಿಯು ಹಾಗೂ ಸ್ಕಾö್ಯನಿಂಗ್ ಘಟಕವನ್ನು ಕಾರ್ಯಾರಂಭಿಸಬೇಕಿದೆ. ಅರೆವಳಿಕೆ ತಜ್ಞರನ್ನು ನೇಮಿಸಿ ಶಸ್ತç ಚಿಕಿತ್ಸೆಯ ಸೇವೆ ನೀಡಬೇಕಿದೆ. ಮೂಳೆಗಳ ಶಸ್ತç ಚಿಕಿತ್ಸೆ ಹಾಗೂ ಕಣ್ಣಿನ ಚಿಕಿತ್ಸೆಗೂ ಉಪಕರಣಗಳನ್ನು ನೀಡಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಗಮನ ಸೆಳೆಯಬೇಕಿದೆ.