ಮಡಿಕೇರಿ, ಅ. ೨೨: ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ನವೆÀಂಬರ್ ೬ ರಂದು ಮಡಿಕೇರಿಯಲ್ಲಿ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ’ ಎಂಬ ಕನ್ನಡ ಹಬ್ಬ ಕಾರ್ಯಕ್ರಮ ಆಯೋಜಿತವಾಗಿದ್ದು ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಸಂಚಾಲಕಿ ಕೆ.ಜಯಲಕ್ಷಿö್ಮ ತಿಳಿಸಿದ್ದಾರೆ.

ನ.೬ ರಂದು ಮಡಿಕೇರಿಯ ಲಯನ್ಸ್ ಸಭಾಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಕ್ಕಳ ಹಿತರಕ್ಷಣೆಗಾಗಿನ ಸೇವಾ ಸಾಧನೆಗಾಗಿ ಕಲ್ಮಾಡಂಡ ಶಶಿಮೊಣ್ಣಪ್ಪ, ಮಾಧ್ಯಮ ಕ್ಷೇತ್ರಕ್ಕಾಗಿ ಶಕ್ತಿ ಪತ್ರಿಕೆಯ ಉಪಸಂಪಾದಕ ಎಂ.ಇ.ಮಹಮ್ಮದ್, ಸಾಹಿತ್ಯ ಕ್ಷೇತ್ರಕ್ಕಾಗಿ ಸುನಿತಾ ಕುಶಾಲನಗರ, ಸಮಾಜ ಸೇವೆಗಾಗಿ ಕೆ.ಟಿ.ಬೇಬಿ ಮ್ಯಾಥ್ಯು, ಕೋವಿಡ್ ಲಾಕ್‌ಡೌನ್ ಸಂದರ್ಭದ ಸೇವೆಗಾಗಿ ಮಡಿಕೇರಿ ಶಾಂತಿನಿಕೇತನ ಸಂಸ್ಥೆಯ ಚೇತನ್, ಯುವ ಪ್ರತಿಭೆ ನಾಪೋಕ್ಲುವಿನ ಯುವ ಗಾಯಕಿ ಶ್ರೀರಕ್ಷಾ ಪ್ರಭಾಕರ್, ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ಮಡಿಕೇರಿ ನಾಗರಿಕರ ಸೇವೆಗಾಗಿ ಮಡಿಕೇರಿ ವಾಣಿಜ್ಯೋದ್ಯಮಿಗಳ ಸಂಸ್ಥೆಯ ಪರವಾಗಿ ಸಂಸ್ಥೆಯ ಅಧ್ಯಕ್ಷ ಎಂ.ಧನAಜಯ ಅವರನ್ನು ಈ ವರ್ಷದ ಪ್ರಶಸ್ತಿಗಾಗಿ ಗುರುತಿಸಲಾಗಿದೆ ಎಂದು ಜಯಲಕ್ಷಿö್ಮ ಮಾಹಿತಿ ನೀಡಿದ್ದಾರೆ.

ಸನ್ಮಾನವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ದೆಗ್ಗನಹಳ್ಳಿ ಆನಂದ್, ಪ್ರಧಾನ ಸಂಚಾಲಕ ಬಸವರಾಜ ಕಲ್ಲುಸಕ್ಕರೆ, ಸಂಚಾಲಕರಾದ ಲಿಂಗೇಶ್ ಹುಣಸೂರು ಪಾಲ್ಗೊಳ್ಳಲಿದ್ದಾರೆ.

ಅಂದು ಬೆಳಿಗ್ಗೆ ಜಿಲ್ಲೆಯ ವಿದ್ಯಾರ್ಥಿಗಳು, ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಲಯನ್ಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆ ವಹಿಲಿದ್ದಾರೆ. ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್, ಮುಂಬೈನ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕೆÀ್ಷ ಜಯಂತಿ ಸಿ. ರಾವ್ ಪಾಲ್ಗೊಳ್ಳಲಿದ್ದಾರೆ ಎಂದು ಜಯಲಕ್ಷಿö್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.