ಪೊನ್ನಂಪೇಟೆ, ಅ. ೨೨: ಮಾಜಿ ಸೈನಿಕರ ಸಂಘದ (ನಂ.೬೪ನೇ) ೯ನೇ ವಾರ್ಷಿಕ ಮಹಾಸಭೆ ಸಮಾಜದ ಆವರಣದಲ್ಲಿ, ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭ ಸಂಘದ ೮೦ ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ಸದಸ್ಯರುಗಳಾದ ಹೆಮ್ಮಚ್ಚಿಮನೆ ಜಿ. ನಾಣಮಯ್ಯ, ಆಪಟ್ಟೀರ ಕೆ. ಮಂದಪ್ಪ, ಚಿಂಡಾಮಾಡ ಎ. ಬೋಪಯ್ಯ, ಬೊಳ್ಳಿಯಂಗಡ ಪಿ. ತಮ್ಮಯ್ಯ, ಕಳ್ಳಿಚಂಡ ಎಮ್. ಸುಬ್ರಮಣಿ, ಅಚ್ಚಿಯಂಡ ಕೆ ಜನಾರ್ಧನ ಅವರುಗಳನ್ನು ಸನ್ಮಾನಿಸಲಾಯಿತು.
ಮಹಾಸಭೆಯಲ್ಲಿ ಅಧ್ಯಕ್ಷರು ಸ್ಪರ್ಶ್, ಅಗ್ನಿಪಥ್ ಮತ್ತು ಇಸಿಹೆಚ್ಎಸ್ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ವಿವರಗಳನ್ನು ತಿಳಿಸಿದರು. ಸ್ಪರ್ಶ್ ಬಗ್ಗೆ ತಮ್ಮ ಪಿ.ಪಿ.ಒ. ಮತ್ತು ಬ್ಯಾಂಕ್ ಖಾತೆಯಲ್ಲಿ ಹೆಸರು, ಜನ್ಮದಿನಾಂಕ, ಪಾನ್ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್, ಇಸಿಹೆಚ್ಎಸ್ ಕಾರ್ಡ್, ಕ್ಯಾಂಟೀನ್ ಕಾರ್ಡ್ಗೆ ಹೊಂದುವAತೆ ಇರಬೇಕೆಂದು ತಿಳಿಸಿದರು. ಮಹಾಸಭೆಯಲ್ಲಿ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಸಿ.ಯಂ. ರಮೇಶ್, ಗೌ. ಕಾರ್ಯದರ್ಶಿ ಪಿ.ಎ. ಶ್ಯಾಂ ಪ್ರಸಾದ್, ಜಂಟಿ ಕಾರ್ಯದರ್ಶಿಗಳಾದ ಬಿ.ಎನ್. ಬೆಳ್ಳಿಯಪ್ಪ, ಎ.ಟಿ. ಮುತ್ತಣ್ಣ, ಖಜಾಂಚಿ ಬಿ.ಕೆ. ರಮೇಶ್, ಆಂತರಿಕ ಲೆಕ್ಕ ಪರಿಶೋಧಕ ಸಿ.ಎ. ಮೇದಪ್ಪ ಹಾಗೂ ನಿರ್ದೇಶಕರುಗಳಾದ ಐ.ಕೆ. ತಮ್ಮಯ್ಯ, ಬಿ.ಬಿ. ಜನಕ, ಎಂ.ಎಸ್. ಮುತ್ತಣ್ಣ, ಎ.ಸಿ. ಸೋಮಯ್ಯ, ಬಿ.ಎಸ್. ಚಂದ್ರಶೇಖರ್, ಹೆಚ್.ಇ. ಕೃಷ್ಣ ಇದ್ದರು.
ಕಾರ್ಯಕ್ರಮವನ್ನು ಐನಂಡ ಪುಷ್ಪಾ ತಮ್ಮಯ್ಯ ಅವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯಿತು. ವನಜ ಮಂದಣ್ಣನವರು ಸನ್ಮಾನಿತರ ವ್ಯಕ್ತಿ ಪರಿಚಯದೊಂದಿಗೆ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅಂತಿಮವಾಗಿ ಚೋಡುಮಾಡ ರಾಜ ಮಾದಪ್ಪನವರ ವಂದನಾರ್ಪಣೆ, ಪುಷ್ಪಾ ತಮ್ಮಯ್ಯ ಅವರ ರಾಷ್ಟçಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು.
-ಶಿವಣ್ಣ