ಮಡಿಕೇರಿ, ಅ. ೨೨: ಸಮಾಜಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದುದು. ಸಮಾಜ ನಿರ್ಮಾಣ ಹಾಗೂ ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಮೂಲಾಧಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಮಕ್ಕಂದೂರು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ೨೦೨೧-೨೨ನೇ ಸಾಲಿನ ದಿ.ಪುಟ್ಟಮ್ಮ ಮತ್ತು ದಿ.ಹೆಬ್ಬಾಲೆ ನಂಜಾಚಾರ್ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮಾಜಕ್ಕೆ ವಿಶ್ವ ಕರ್ಮ ಸಮುದಾಯದ ಕೊಡುಗೆ’ ಎಂಬ ವಿಚಾರದಡಿ ಅವರು ಉಪನ್ಯಾಸ ನೀಡಿದರು. ವಿಶ್ವಕರ್ಮ ಇಲ್ಲದೆ ಜಗತ್ತು ಮುಂದುವರಿಯಲು ಸಾಧ್ಯವಿಲ್ಲ; ಅವರು ಎಲ್ಲರ ಹೃದಯದಲ್ಲಿ ಇರುವವರು. ಸೃಷ್ಟಿಕರ್ತನ ಒಂದು ಭಾಗವೇ ವಿಶ್ವಕರ್ಮ, ಅನೇಕ ಹೆಸರು ಗಳಲ್ಲಿ ಕರೆಯಲ್ಪಡುವ ವಿಶ್ವಕರ್ಮ ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಶಿಲ್ಪಕಲೆ ಮೂಲಕ ದೇವತೆಗಳ ಮೂರ್ತಿ ರಚನೆಯೊಂದಿಗೆ ಭಗವಂತನಿಗೆ ಆಕಾರ ನೀಡಿದವನು. ವೇದ, ಉಪನಿಷತ್ತು ಗಳಲ್ಲೂ ಸ್ಥಾನಮಾನವಿದ್ದು, ಶತಮಾನಗಳ ಧಾರ್ಮಿಕ, ಅಧ್ಯಾತ್ಮದಲ್ಲಿ, ರಾಜಪರಂಪರೆಯ ಮೂಲಕವೂ ಸಮಾಜಕ್ಕೆ ಪರಿಚಯ ದೊಂದಿಗೆ ಸ್ಪೂರ್ತಿ ತುಂಬಿದ ಮಡಿಕೇರಿ, ಅ. ೨೨: ಸಮಾಜಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದುದು. ಸಮಾಜ ನಿರ್ಮಾಣ ಹಾಗೂ ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಮೂಲಾಧಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಮಕ್ಕಂದೂರು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ೨೦೨೧-೨೨ನೇ ಸಾಲಿನ ದಿ.ಪುಟ್ಟಮ್ಮ ಮತ್ತು ದಿ.ಹೆಬ್ಬಾಲೆ ನಂಜಾಚಾರ್ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮಾಜಕ್ಕೆ ವಿಶ್ವ ಕರ್ಮ ಸಮುದಾಯದ ಕೊಡುಗೆ’ ಎಂಬ ವಿಚಾರದಡಿ ಅವರು ಉಪನ್ಯಾಸ ನೀಡಿದರು. ವಿಶ್ವಕರ್ಮ ಇಲ್ಲದೆ ಜಗತ್ತು ಮುಂದುವರಿಯಲು ಸಾಧ್ಯವಿಲ್ಲ; ಅವರು ಎಲ್ಲರ ಹೃದಯದಲ್ಲಿ ಇರುವವರು. ಸೃಷ್ಟಿಕರ್ತನ ಒಂದು ಭಾಗವೇ ವಿಶ್ವಕರ್ಮ, ಅನೇಕ ಹೆಸರು ಗಳಲ್ಲಿ ಕರೆಯಲ್ಪಡುವ ವಿಶ್ವಕರ್ಮ ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಶಿಲ್ಪಕಲೆ ಮೂಲಕ ದೇವತೆಗಳ ಮೂರ್ತಿ ರಚನೆಯೊಂದಿಗೆ ಭಗವಂತನಿಗೆ ಆಕಾರ ನೀಡಿದವನು. ವೇದ, ಉಪನಿಷತ್ತು ಗಳಲ್ಲೂ ಸ್ಥಾನಮಾನವಿದ್ದು, ಶತಮಾನಗಳ ಧಾರ್ಮಿಕ, ಅಧ್ಯಾತ್ಮದಲ್ಲಿ, ರಾಜಪರಂಪರೆಯ ಮೂಲಕವೂ ಸಮಾಜಕ್ಕೆ ಪರಿಚಯ ದೊಂದಿಗೆ ಸ್ಪೂರ್ತಿ ತುಂಬಿದ ಪೀಳಿಗೆ ಹಾಗೂ ಜಿಲ್ಲೆಯ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿ ಕೊಂಡು ಬರಲಾಗುತ್ತಿದೆ. ಪರಿಷತ್ತಿನಲ್ಲಿ ಹಲವಾರು ದತ್ತಿಗಳಿದ್ದು, ಇದೊಂದು ಹಿರಿಯರನ್ನು ನೆನೆಸಿಕೊಳ್ಳುವ ಕಾರ್ಯಕ್ರಮ. ಹಳ್ಳಿ ಶಾಲೆಗಳಲ್ಲಿ. ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಗು ತ್ತಿದೆ. ಪರಿಷತ್ತಿನಲ್ಲಿ ಎಲ್ಲರಿಗೂ ಸದಸ್ಯರಾಗುವ ಅವಕಾಶ ಮುಕ್ತ ವಾಗಿದ್ದು, ಸದಸ್ಯತ್ವ ಪಡೆದುಕೊಂಡು ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಕೋರಿದರು.

ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ, ಸ್ಥಳೀಯರೂ ಆದ ಕುಡೆಕಲ್ ಸಂತೋಷ್ ಮಾತನಾಡಿ; ವಿದ್ಯಾರ್ಥಿಗಳು ಹಿರಿಯರು, ದಾರ್ಶನಿಕರ ವಿಚಾರಧಾರೆ ಗಳನ್ನು ಮನನ ಮಾಡಿಕೊಂಡು ಸಮಾಜದಲ್ಲಿ ಸಾಧನೆ ಮಾಡುವ ಗುರಿ ಹೊಂದಿರಬೇಕು. ಪ್ರತಿ ವರ್ಷದಂತೆ ಮುಂದಿನ ವರ್ಷ ಕೂಡ ಹತ್ತನೇ ತರಗತಿಯಲ್ಲಿ ಶೇ.೧೦೦ರ ಸಾಧನೆ ಮಾಡುವಂತೆ ಆಶಿಸಿದರು.

ದತ್ತಿನಿಧಿ ದಾನಿ, ಪುಟ್ಟಮ್ಮ ಹಾಗೂ ನಂಜಾಚಾರ್ ಅವರ ಪುತ್ರ ಸುಬ್ರಮಣ್ಯ ಮಾತನಾಡಿ; ತಂದೆ, ತಾಯಿ ಹೆಸರು ಉಳಿಯಬೇಕು, ಅವರುಗಳ ಆಶೀರ್ವಾದ ಇರಬೇಕೆಂಬ ಉದ್ದೇಶದೊಂದಿಗೆ ಅವರುಗಳ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಲಾಗಿದೆ. ಎಲ್ಲರ ಜೀವನದಲ್ಲೂ ಹುಟ್ಟಿನಿಂದ ಸಾವಿನವರೆಗೆ ವಿಶ್ವಕರ್ಮ ಬೇಕು., ವಿಶ್ವಕರ್ಮನ ಕೊಡುಗೆ ಸಮಾಜಕ್ಕೆ ಬಹಳಷ್ಟಿದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ತ ಆಸಕ್ತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಧ್ಯಾಪಕರು ಕೂಡ ಅಧ್ಯಯನ ಮಾಡಬೇಕು. ಪ್ರತಿಭಾವಂತರಿಗೆ ವೇದಿಕೆ ನಿರ್ಮಾಣ ಮಾಡುವ ಉದ್ದೇಶ ವಾಗಿದ್ದು, ಮಕ್ಕಳು ಕತೆಗಳನ್ನು, ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮತ್ತೋರ್ವ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕನ್ನಡ ಹಾಗೂ ಸಾಹಿತ್ಯ ಬೆಳವಣಿಗೆ ಸರಕಾರಿ ಶಾಲೆಗಳಿಂದಲೇ ಆಗುತ್ತಿದೆ. ಹಾಗಾಗಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸ ಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಕಸಾಪದಲ್ಲಿ ಒಟ್ಟು ೨೧ ದತ್ತಿಗಳಿದ್ದು, ನಾಲ್ಕು ದತ್ತಿಗಳನ್ನು ಮಡಿಕೇರಿ ತಾಲೂಕಿಗೆ ನೀಲಾಗಿತ್ತು, ಈ ಪೈಕಿ ಎಲ್ಲ ದತ್ತಿ ಕಾರ್ಯಕ್ರಮಗಳು ಪೂರ್ಣಗೊಂಡಿರು ವದಾಗಿ ಹೇಳಿದರು. ಜನರಿಗೆ ಮಾಡಿದ ಸೇವೆಯನ್ನು ಗುರುತಿಸಲು ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುತ್ತಿದೆ. ಪರಿಷತ್ತಿನಲ್ಲಿ ದತ್ತಿ ಸ್ಥಾಪನೆ ಮಾಡಲು ದಾನಿಗಳು ಆಸಕ್ತಿಯಿಂದ ಮುಂದೆ ಬರಬೇಕು. ೧೮ ಮೇಲ್ಪಟ್ಟವರು ಸದಸ್ಯತ್ವ ಪಡೆದು ಪರಿಷತ್ತನ್ನು ಬೆಳೆಸ ಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದತ್ತಿ ದಾನಿ ರೇಣುಖ, ಕಸಾಪ ಜಿಲ್ಲಾ ನಿರ್ದೇಶಕ ವಿ.ಟಿ. ಮಂಜುನಾಥ್, ದಾನಿಗಳ ಕುಟುಂಬಸ್ಥರು, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರೆ, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕುಂಬಗೌಡನ ರಂಜಿತ್ ಸ್ವಾಗತಿಸಿ, ನಿರೂಪಿಸಿದರು.