ಕಣಿವೆ, ಅ. ೨೦: ಕುಶಾಲನಗರ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ಗುಜರಾತ್ ಮೂಲದ ಪ್ರವಾಸಿಗರಿಗೆ ಸೇರಿದ ಸುಮಾರು ರೂ. ೧೦ ಲಕ್ಷ ಮೌಲ್ಯದ ವಜ್ರದ ಆಭರಣಗಳು ಸೇರಿದಂತೆ ನಗದು ಹಣವನ್ನು ದುಷ್ಕರ್ಮಿಗಳು ಕಳವು
ಮಾಡಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಜರಾತ್ ಮೂಲದ ಅಬಾಹ್ ಎಂಬವರು ತಮ್ಮ ಇಬ್ಬರು ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಧಾವಿಸಲು ಯೋಜನೆ ರೂಪಿಸಿ ಆನ್ಲೈನ್ನಲ್ಲಿ ಖಾಸಗಿ ರೆಸಾರ್ಟ್ ನಲ್ಲಿ ಎರಡು ಕೊಠಡಿಗಳನ್ನು ಅಕ್ಟೋಬರ್ ೧೫ ರಂದು ಕಾಯ್ದಿರಿಸಿದ್ದರು ಎನ್ನಲಾಗಿದೆ.
ಅಂತೆಯೇ ಕೊಠಡಿಗಳಿಗೆ ಧಾವಿಸಿದ ಈ ಪ್ರವಾಸಿಗರು ತಾವು ತಂಗಲಿದ್ದ ಕೊಠಡಿಯ ಟೇಬಲ್ ಮೇಲೆ ತಾವು ತಂದಿದ್ದ ವಜ್ರದ ಆಭರಣಗಳು ಹಾಗೂ ಹಣ ಇದ್ದ ಪರ್ಸುಗಳನ್ನು ಇಟ್ಟು ವಾಹನದ ಮೂಲಕ ಮಡಿಕೇರಿಯ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿದ್ದರು.
ಬಳಿಕ ರಾತ್ರಿ ಕೊಠಡಿಗಳಿಗೆ ಬಂದು ನೋಡಿದಾಗ ಆಭರಣ ಹಾಗೂ ಹಣ ಇಟ್ಟಿದ್ದ ಪರ್ಸ್ಗಳು ಕಾಣೆಯಾಗಿದ್ದು ಇದರಿಂದ ಬೆಚ್ಚಿ ಬಿದ್ದ ಪ್ರವಾಸಿಗರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಅಬಾಹ್ ಎಂಬವರ ಪರ್ಸಿನಲ್ಲಿ ಒಂದು ವಜ್ರದ ಉಂಗುರ, ಒಂದು ವಜ್ರದ ಪೆಂಡೆAಟ್ ಇರುವ ಚಿನ್ನದ ಚೈನು ಹಾಗೂ ೭೫ ಸಾವಿರ ಹಣ, ಮೋನಿಕಾ ಎಂಬವರ ಪರ್ಸಿನಲ್ಲಿ ಇಟ್ಟಿದ್ದ ಒಂದು ಜೊತೆ ವಜ್ರದ ಓಲೆ, ಒಂದು ವಜ್ರದ ಪೆಂಡೆAಟ್ ಇರುವ ಚಿನ್ನದ ಚೈನು, ಒಂದು ವಜ್ರದ ಉಂಗುರ ಹಾಗೂ ೪೫ ಸಾವಿರ ಹಣ, ಪ್ರತೀಕ್ಷಾ ಎಂಬವರ ಪರ್ಸಿನಲ್ಲಿದ್ದ ೧೦ ಸಾವಿರ ಹಣ ಸೇರಿದಂತೆ ಒಟ್ಟು ೯.೮೦ ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಕಳುವಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬAಧ ದೂರು ದಾಖಲಿಸಿಕೊಂಡಿ ರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಗುಜರಾತ್ ಪ್ರವಾಸಿಗರು ಪಡೆದುಕೊಂಡಿದ್ದ ಕೊಠಡಿಗಳ ಕಿಟಕಿಗಳಲ್ಲಿ ಕಬ್ಬಿಣದ ಸರಳುಗಳು ಇರಲಿಲ್ಲ. ಕೇವಲ ಗ್ಲಾಸಿನ ಕಿಟಕಿ ಮಾತ್ರ ಅಳವಡಿಸಲಾಗಿತ್ತು ಎಂದು ಹೇಳಲಾಗುತ್ತಿದ್ದು ಕಿಟಕಿ ಜಖಂಗೊಳಿಸಿ ಒಳ ನುಗ್ಗಿ ಕಳ್ಳತನ ಮಾಡಲಾಗಿದೆ.
ಈ ಹಿಂದೆಯೂ ಇದೇ ರೆಸಾರ್ಟ್ನಲ್ಲಿ ಪ್ರವಾಸಿಗರ ವಸ್ತುಗಳ ಕಳ್ಳತನ ನಡೆದಿತ್ತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಅಮನ್ವನ ರೆಸಾರ್ಟ್ನಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಸಿಸಿ ಟಿವಿ ಫೂಟೇಜ್ ಪರಿಶೀಲಿಸಲಾಗುತ್ತಿದೆ. ಹಾಗೆಯೇ ಆಗಂತುಕರನ್ನು ಪತ್ತೆ ಹಚ್ಚಲು ತಂಡವೊAದನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.