ಶನಿವಾರಸAತೆ, ಅ. ೨೦: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತÀದ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ, ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಚಾಲಕನಿಗೆ ಸೋಮವಾರಪೇಟೆ ನ್ಯಾಯಾಲಯ ರೂ. ೧೭ ಸಾವಿರ ದಂಡ ವಿಧಿಸಿದೆ.
ಯಸಳೂರು ಹೋಬಳಿಯ ಕಳಲೆ ಗ್ರಾಮದ ನಿವಾಸಿ ಕೆ.ಪಿ. ರಂಜಿತ್ ತಾ. ೧೫ ರಂದು ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯ ಸೇವಿಸಿ ತನ್ನ ಬೈಕನ್ನು ಚಾಲನೆ ಮಾಡುತ್ತಿದ್ದು, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿಗಳಾದ ಪ್ರದೀಪ್, ಶಶಿಕುಮಾರ್, ಮಹೇಶ್, ಸತೀಶ್, ಕುಮಾರ್ ಇತರರು ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾಗ, ಹೆಲ್ಮೆಟ್ ಧರಿಸದ ಮೋಟಾರ್ ಸೈಕಲ್ ಸವಾರನನ್ನು ಆಲ್ಕೋಮೀಟರ್‌ಗೆ ಒಳಪಡಿಸಲಾಗಿ ಮದ್ಯ ಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಾಗಿದೆ. ಬೈಕ್ ಚಾಲಕ ತಾ. ೧೯ ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಬೈಕ್ ಚಾಲಕನಿಗೆ ರೂ. ೧೭ ಸಾವಿರ ದಂಡ ವಿಧಿಸಿದೆ.