ÀÄಂಟಿಕೊಪ್ಪ, ಅ. ೨೦: ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಕೂಲಿ ಕಾರ್ಮಿಕನ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಪ್ರಕರಣ ನಡೆದಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಉಲುಗುಲಿ ತೋಟದಲ್ಲಿ ಕಾರ್ಮಿಕ ಲಕ್ಷö್ಮಣ ಎಂದಿನAತೆ ಹಗಲಿನ ವೇಳೆ ಕೆÀಲಸ ಮಾಡುತ್ತಿರುವಾಗ ಕಾಡು ಹಂದಿಗಳ ಗುಂಪಿನಿAದ ದಿಢೀರನೆ ಹಂದಿಯೊAದು ದಾಳಿ ನಡೆಸಿ ಕೋರೆಯಿಂದ ಕಾಲಿನ ತೊಡೆಯ ಭಾಗಕ್ಕೆ ತಿವಿದು ಗಂಭೀರ ಗಾಯಗೊಳಿಸಿ ಪರಾರಿಯಾಗಿದೆ.
ವಿಷಯ ತಿಳಿದ ತೋಟದÀ ವ್ಯವಸ್ಥಾಪಕ ಅಬ್ದುಲ್ ಸಲಾಂ ಗಾಯಾಳು ಲಕ್ಷö್ಮಣನನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಕಾಡಾನೆ ಹಾವಳಿಯೊಂದಿಗೆ ಕಾರ್ಮಿಕರು, ಕೃಷಿಕರು ಕಷ್ಟ-ನಷ್ಟ ಅನುಭವಿಸುವುದರ ನಡುವೆ ಇದೀಗ ಕಾಡು ಹಂದಿಗಳ ಹಾವಳಿಯಿಂದ ತೋಟಗಳಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ ಎಂದು ತೋಟದ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.