ಸಿದ್ದಾಪುರ, ಅ. ೨೦: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಕಾಫಿ ಮಂಡಳಿ ಗೋಣಿಕೊಪ್ಪ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ಮಾಲ್ದಾರೆಯ ಅದಿವಾಸಿ ಕಾಫಿ ಕರಿಮೆಣಸು ಸಂಘದ ಆದಿವಾಸಿ ಬುಡಕಟ್ಟು ಬೆಳೆಗಾರರಿಗೆ ಕಾಫಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ದಕ್ಷಿಣ ಕೊಡಗು ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಶ್ರೀದೇವಿ ಮಾತನಾಡಿ, ಆದಿವಾಸಿಗಳು ಆರ್ಥಿಕವಾಗಿ ಮುಂದುವರಿಯಲು ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲು ಗಳನ್ನು ಬೆಳೆಯಲು ಇಲಾಖೆಯಿಂದ ಹಲವಾರು ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆದಿವಾಸಿಗಳಿಗೆ ಆರ್ಥಿಕವಾಗಿ ಮುಂದುವರಿಯಲು ಸಹಕಾರ ವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ಕಾಫಿ ಬೆಳೆಯಲು ತುಂತುರು ನೀರಾವರಿ ಅಳವಡಿಕೆ, ಗೊಬ್ಬರಗಳ ನಿರ್ವಹಣೆ, ಸುಣ್ಣದ ಬಳಕೆ, ಕಳೆಗಳ ನಿಯಂತ್ರಣ ಮುಂತಾದ ಮುಂಜಾಗ್ರತಾ ಬೇಸಾಯ ಕ್ರಮಗಳ ಬಗ್ಗೆ ಸಿದ್ದಾಪುರದ ಕಾಫಿ ಮಂಡಳಿಯ ಕಿರಿಯ ಸಂಪರ್ಕ ಅಧಿಕಾರಿ ಖದೀಜ ಆದಿವಾಸಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಕಾಫಿ ಮಂಡಳಿಯ ವಿಸ್ತರಣಾ ಅಧಿಕಾರಿ ಧನ್ಯ, ತಾಂತ್ರಿಕ ಸಹಾಯಕ ಮಧು, ಕಾಫಿ ಮಂಡಳಿ ನಿತಿನ್, ಗವಿನ್, ಕಾಫಿ, ಮೆಣಸು ಬೆಳೆಗಾರರ ಸಂಘದ ಅಧ್ಯಕ್ಷ ಕಾಳ, ಕಾರ್ಯದರ್ಶಿ ದಿವಾಕರ್, ಚಂದ, ಹಿರ, ಸಿದ್ದ, ಅಣ್ಣಪ್ಪ, ಮಾದಪ್ಪ, ಅಶೋಕ್, ಡೋಬಿ, ಕೆಂಚ ಮತ್ತಿತರರು ಹಾಜರಿದ್ದರು.