*ಗೋಣಿಕೊಪ್ಪ, ಅ. ೨೦: ಮಾರ್ಚ್ ಅಂತ್ಯದೊಳಗೆ ಇಲಾಖೆಯ ವಿವಿಧ ಅನುದಾನಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಂಬAಧಿಸಿದ ಇಲಾಖೆ ಅಧಿಕಾರಿಗಳು ಆಸಕ್ತರಾಗಬೇಕು ಎಂದು ಪೊನ್ನಂಪೇಟೆ- ವೀರಾಜಪೇಟೆ ತಾ.ಪಂ. ಆಡಳಿತ ಅಧಿಕಾರಿ ಮತ್ತು ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು. ಪೊನ್ನಂಪೇಟೆ ತಾ.ಪಂ. ಕಚೇರಿ ಆವರಣದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆÀ ಸಭೆಯಲ್ಲಿ ಕಾಮಗಾರಿಗಳ ಬದಲಾವಣೆ, ವಿವಿಧ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆ ಗ್ರಾಮೀಣ ರೈತರಿಗೆ ಅನುಕೂಲವಾಗುವ ಗಿಡಗಳ ವಿತರಣೆಗೆ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ಅಮೃತ ಸರೋವರ ಯೋಜನೆಯಲ್ಲಿ ೨೨ ಕೆರೆಗಳು ತಾಲೂಕಿನಲ್ಲಿ ಆಯ್ಕೆ ಆಗಿದ್ದು ೭ ಕೆರೆಗಳ ಕಾಮಗಾರಿ ನಡೆಯುತ್ತಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಉಳಿದ ಕೆಲಸಗಳು ಪ್ರಾರಂಭಿಸಲಾಗುವುದು ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಮಾಹಿತಿ ನೀಡಿದರು.ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ತಾ.ಪಂ. ವ್ಯವಸ್ಥಾಪಕಿ ಸ್ವರೂಪ್ ಮತ್ತು ಸಿಬ್ಬಂದಿಗಳು ಇದ್ದರು.