ಕಣಿವೆ, ಅ. ೨೦: ಕಳೆದ ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಶುಂಠಿ ಫಸಲಿನಲ್ಲಿ ಏರಿಕೆ ಕಂಡಿದೆ. ಇದರಿಂದಾಗಿ ಶುಂಠಿ ಬೆಳೆಗಾರರಲ್ಲಿ ಮಂದಹಾಸ ಗರಿಗೆದರಿದೆ. ಕಳೆದ ಎರಡು ವರ್ಷಗಳಲ್ಲಿ ಮಾರಕ ಕೊರೊನಾದ ಕರಿನೆರಳಿನಲ್ಲಿ ಅಪಾರ ನಷ್ಟದಲ್ಲಿ ಸಿಲುಕಿದ್ದ ಶುಂಠಿ ಬೆಳೆಗಾರರಿಗೆ ಇದೀಗ ಏರಿಕೆ ಕಾಣುತ್ತಿರುವ ಶುಂಠಿ ಫಸಲು ಸಂಕಷ್ಟದ ದಿಗಿಲನ್ನು ದೂರಮಾಡಿದೆ.
೬೦ ಕೆ.ಜಿ. ತೂಕದ ಚೀಲವೊಂದರ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಇದೀಗ ರೂ. ೨೧೦೦ ರಿಂದ ರೂ. ೨೨೦೦ ಇದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇದೇ ಶುಂಠಿಗೆ ಮಾರುಕಟ್ಟೆಯಲ್ಲಿ ೧೫೦೦ ರೂಗಳಿಂದ ರೂ. ೧೭೦೦ ಇತ್ತು. ಈ ಬಾರಿ ಬೆಳೆಗಾರರು ಕೈಗೊಂಡಿದ್ದ ಶುಂಠಿ ಫಸಲು ಬಹುತೇಕ ಪ್ರಮಾಣದಲ್ಲಿ ರೋಗಕ್ಕೆ ತುತ್ತಾಗಿತ್ತು.
ಕರ್ನಾಟಕವೂ ಸೇರಿದಂತೆ ಮಹಾರಾಷ್ಟç, ಛತ್ತೀಸ್ಗಡ, ಮಧ್ಯ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಹಿಮಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಬೆಳೆದಿದ್ದ ಶುಂಠಿಯ ಫಸಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ ಮಾರಕವಾದ ಪರಿಣಾಮ ಬೀರಿತ್ತು. ಅತ್ಯಂತ ಹೆಚ್ಚಾಗಿ ಶುಂಠಿ ಬೆಳೆಯುವ ನೆರೆ ರಾಷ್ಟç ಚೀನಾದಲ್ಲಿ ಬೆಳೆದಿದ್ದ ಶುಂಠಿಗೆ ಮಾರಕ ವೈರಸ್ ಕಾಡಿದರೆ, ನೈಜೀರಿಯಾದಲ್ಲಿ ಬೆಳೆದಿದ್ದ ಶುಂಠಿ ಫಸಲು ವ್ಯಾಪಕ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಬೆಳೆಯುವ ಶುಂಠಿಗೆ ಅಂರ್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಎನ್ನುತ್ತಾರೆ ಕುಶಾಲನಗರ ತಾಲೂಕಿನ ಪ್ರಗತಿಪರ ಕೃಷಿಕ ಎಂ.ಟಿ. ಬೇಬಿ ಹಾಗೂ ಹುಣಸೂರಿನ ನಟೇಶ್.
ಕಳೆದ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಫಸಲಿಗೆ ವ್ಯಾಪಕವಾದ ಕೊಳೆರೋಗ ಮೊದಲಾದ ರೋಗ ಭೀತಿ ಹರಡಿದ್ದರಿಂದ ರೋಗ ಹತೋಟಿಗೆ ತರಲಾರದ ಕೃಷಿಕರು ಅವಧಿಗೆ ಮುನ್ನವೇ ಜೂನ್, ಜುಲೈ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಚೀಲವೊಂದಕ್ಕೆ ಕೇವಲ ೬೫೦ ರೂಗಳಿಂದ ೭೦೦ ರೂಗಳಿಗೆ ಶುಂಠಿ ಕಟಾವು ಮಾಡಿದ್ದರು.
ರೋಗಗಳು ಕಾಡಿದಾಗ್ಯೂ ರಸಾಯನಿಕಗಳ ಮೂಲಕ ರೋಗ ಹತೋಟಿಗೆ ತಂದಿದ್ದ ಕೃಷಿಕರು ಉಳಿಸಿಕೊಂಡಿದ್ದ ಶುಂಠಿ ಫಸಲಿಗೆ ಇದೀಗ ಮಾರುಕಟ್ಟೆಯಲ್ಲಿ ಉತ್ತಮ ದರ ದೊರಕುತ್ತಿದೆ.
ಬಿತ್ತನೆ ಬೀಜದ ಏರಿಕೆ ಸಂಭವ
ಇದೀಗ ಮಾರುಕಟ್ಟೆಯಲ್ಲಿ ಶುಂಠಿಯ ದರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಕೈಗೊಳ್ಳಲಿರುವ ಶುಂಠಿ ಬಿತ್ತನೆಗೆ ಬಿತ್ತನೆ ಬೀಜದ ದರ ಹೆಚ್ಚಾಗುವ ಸಂಭವವಿದೆ ಎನ್ನಲಾಗುತ್ತಿದೆ. ಹಾಗಾಗಿ ಅದೃಷ್ಟದ ಬೆಳೆ ಎಂದೇ ಪ್ರಚಲಿತದಲ್ಲಿರುವ ಈ ಶುಂಠಿ ಫಸಲನ್ನು ಉತ್ತಮವಾಗಿ ನಿರ್ವಹಿಸಿರುವ ಬೆಳೆಗಾರರಿಗೆ ಇದೀಗ ಲಾಟರಿ ಹೊಡೆದಂತಹ ಅನುಭವವಾಗುತ್ತಿದೆ.
ಭೂಮಿಗೆ ಭಾರೀ ಬೇಡಿಕೆ
ಮಾರುಕಟ್ಟೆಯಲ್ಲಿ ಶುಂಠಿಗೆ ಉತ್ತಮ ದರ ದೊರಕಿದ ಹಿನ್ನೆಲೆಯಲ್ಲಿ ಮುಂದಿನ ಬಾರಿ ಅಣಿಗೊಳಿಸಲಿರುವ ಖಾಲಿ ಹೊಲ ಗದ್ದೆಗಳಿಗೆ ಭಾರೀ ಬೇಡಿಕೆ ಇದೆ ಎನ್ನಲಾಗುತ್ತಿದೆ.
ಅಂದರೆ ಒಂದು ಎಕರೆ ಕೃಷಿ ಭೂಮಿಯಲ್ಲಿ ಶುಂಠಿ ಬೆಳೆಯಲು ೫೦ ಸಾವಿರ ಪ್ರತೀ ಎಕರೆಗೆ ತಗಲುವ ಸಂಭವವಿದೆ ಎಂದು ಎಂ.ಟಿ.ಬೇಬಿ ಹೇಳುತ್ತಾರೆ.
- ಕೆ.ಎಸ್. ಮೂರ್ತಿ