ಸೋಮವಾರಪೇಟೆ, ಅ. ೧೯: ಕ್ಷÄಲ್ಲಕ ವಿಚಾರಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪಟ್ಟಣದಲ್ಲಿ ಯುವಕರ ನಡುವೆ ಘರ್ಷಣೆ ನಡೆದಿದ್ದು, ವಿಭಿನ್ನ ಕೋಮಿನ ಯುವಕರಾಗಿದ್ದರಿಂದ ಪೊಲೀಸ್ ಇಲಾಖೆ ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಟ್ಟಣಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ನಡುವೆ ಕ್ಷÄಲ್ಲಕ ಕಾರಣಕ್ಕೆ ಜಗಳವಾಗಿದೆ. ಇದೇ ಜಗಳ ನಿನ್ನೆದಿನ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾರ್ವಜನಿಕವಾಗಿ ಯುವಕರ ತಂಡದ ನಡುವೆ ಘರ್ಷಣೆಗೆ ಕಾರಣವಾಗಿದೆ.
ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಹಿಂದೂಪರ ಸಂಘಟನೆಯ ನೇಗಳ್ಳೆ ಜೀವನ್, ಪ್ರದೀಪ್, ಅಪ್ಪು ಅವರುಗಳ ವಿರುದ್ಧ ದೂರು ದಾಖಲಾಗಿದೆ. ಇದೇ ಘಟನೆಯ ಭಾಗವಾಗಿ ಅಜೀಂ ಬೇಗ್ ಅಲಿಯಾಸ್ ಅಡ್ಡು, ರಿಹಾನ್ ಅವರುಗಳ ವಿರುದ್ಧವೂ ದೂರು ನೀಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಪ್ರೌಢಶಾಲೆಗೆ ಸೇರಿದ ವಿದ್ಯಾರ್ಥಿಗಳ ನಡುವೆ, ಹುಡುಗಿ ಯನ್ನು ಮಾತನಾಡಿಸಿದ ವಿಚಾರಕ್ಕೆ ಸಂಬAಧಿಸಿದAತೆ ಜಗಳವಾಗಿದೆ. ಈ ಘಟನೆಗೆ ಸಂಬAಧಿಸಿದAತೆ ಮೊನ್ನೆ ರಾತ್ರಿ ಅಜೀಂ ಬೇಗ್ ಹಾಗೂ ಅಪ್ಪು ಅವರುಗಳೊಂದಿಗೆ ಮೊಬೈಲ್ನಲ್ಲಿ ಮಾತುಕತೆ ನಡೆದಿದೆ.
ಈ ಬಗ್ಗೆ ನಿನ್ನೆ ದಿನ ಅಜೀಂ ಬೇಗ್ನ ವರ್ಕ್ಶಾಪ್ ಬಳಿ ತೆರಳಿದ ಜೀವನ್ ಸೇರಿದಂತೆ ಇತರರು, ಅಜೀಂ ಬೇಗ್ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭ ವರ್ಕ್ಶಾಪ್ನಲ್ಲಿದ್ದ ಹುಮಾಯೂನ್ ಬೇಗ್(ಅಂಬು) ಹಾಗೂ ಆತನ ಮಗ ರಿಹಾನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಇದೇ ಘಟನೆಗೆ ಸಂಬAಧಿಸಿ ದಂತೆ ಅಪೂರ್ವನ್ (ಅಪ್ಪು) ಸಹ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದು, ಕ್ಷÄಲ್ಲಕ ವಿಚಾರಕ್ಕೆ ಸಂಬAಧಿಸಿದAತೆ ಜಗಳ ತೆಗೆದು ಅಜೀಂ ಬೇಗ್ ಮತ್ತು ರಿಹಾನ್ ಅವರುಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಎರಡು ಕೋಮುಗಳ ಯುವಕರ ನಡುವಿನ ಘರ್ಷಣೆಯಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಪಟ್ಟಣದ ಆಯ್ದ ಕಡೆಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಪರಿಸ್ಥಿತಿಯ ಅವಲೋಕನ ನಡೆಸಿದೆ.
ಶನಿವಾರಸಂತೆ, ಮಡಿಕೇರಿ, ಸುಂಟಿಕೊಪ್ಪದಿAದಲೂ ಪೊಲೀಸರು ಆಗಮಿಸಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ.