ಶನಿವಾರಸಂತೆ, ಅ. ೨೦: ಗ್ರಾಮ ದೇವತೆಗಳಾದ ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿದೇವಿ ಹಾಗೂ ಪರಿವಾರ ದೇವರ ವಾರ್ಷಿಕೋತ್ಸವ ವನ್ನು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿದೇವಿ ಹಾಗೂ ಪರಿವಾರ ದೇವರ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹೇಳಿದರು.
ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿದೇವಿ ಹಾಗೂ ಪರಿವಾರ ದೇವರ ಸಮಿತಿ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-೧೯, ಲಾಕ್ಡೌನ್ ೨ ವರ್ಷಗಳ ನಂತರ ಗ್ರಾಮದ ಅಭ್ಯುದಯಕ್ಕಾಗಿ, ಶಾಂತಿ-ಸೌಹಾರ್ದತೆಗಾಗಿ ನವೆಂಬರ್ ೨೧ ರಂದು ನಡೆಯುವ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಕಾರ್ಯದರ್ಶಿ ಎಸ್.ಎಸ್. ದಿವಾಕರ್ ವರದಿ ವಾಚಿಸಿ, ಜಮಾ-ಖರ್ಚಿನ ಪರಿಶೀಲನೆ ಬಗ್ಗೆ ಮಾಹಿತಿ ನೀಡಿದರು. ವಾರ್ಷಿಕೋತ್ಸವ, ದೇವಾಲಯದ ಆಡಳಿತ ಮಂಡಳಿ ಚುನಾವಣೆ, ದೇವಾಲಯ ಮೇಲ್ಛಾವಣಿ ನಿರ್ಮಾಣದ ಬಗ್ಗೆ ನಿರ್ದೇಶಕರು, ಸದಸ್ಯರು ಚರ್ಚೆ ನಡೆಸಿದರು. ಆಡಳಿತ ಮಂಡಳಿ ಗೌರವಾಧ್ಯಕ್ಷ ಅರವಿಂದ್, ಉಪಾಧ್ಯಕ್ಷ ಬಿ.ಕೆ. ಚಂದ್ರು, ಕಾರ್ಯದರ್ಶಿ ದಿವಾಕರ್, ನಿರ್ದೇಶಕರಾದ ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಕಾಂತರಾಜ್, ಎಸ್.ಆರ್. ಮಧು, ಮುಶೀರ್ ಅಹಮ್ಮದ್, ಲೋಕೇಶ್ ಹಾಜರಿದ್ದರು.