ಕೂಡಿಗೆ, ಅ. ೨೦: ತೊರೆನೂರು ಗ್ರಾಮದಿಂದ ಭೈರಪ್ಪನಗುಡಿ-ಅಳುವಾರಕ್ಕೆ ಹೋಗುವ ಮಾರ್ಗದಲ್ಲಿರುವ ತೊರೆನೂರು ಸಹಕಾರ ಸಂಘದ ನಿರ್ದೇಶಕ ಟಿ.ಜಿ.ಲೋಕೇಶ್ ಎಂಬವರಿಗೆ ಸೇರಿದ ಕರುವನ್ನು ಸಂಜೆ ೬ ಗಂಟೆಯ ಸಮಯದಲ್ಲಿ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಚಿರತೆ ದಾಳಿ ನಡೆಸಿ ಸಂಪೂರ್ಣವಾಗಿ ತಿಂದು ಹಾಕಿದೆ.
ಕಳೆದ ರಾತ್ರಿ ಅಳುವಾರ ಮತ್ತು ಅರಗಲ್ಲು ಗ್ರಾಮದಲ್ಲಿಯೂ ಚಿರತೆ ಹಸುಗಳ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ. ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕೆಂಬದು ಈ ವ್ಯಾಪ್ತಿಯ ರೈತರ ಆಗ್ರಹವಾಗಿದೆ.