ಮಡಿಕೇರಿ, ಅ. ೧೯: ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಕುಶಾಲನಗರದಿಂದ ಪುಣ್ಯಕ್ಷೇತ್ರ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ತೀರ್ಥೋದ್ಭವದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಸೆದಿದ್ದ ಕಸಗಳನ್ನು ಹೆಕ್ಕಿ ಸ್ವಚ್ಛ ಮಾಡುವದರೊಂದಿಗೆ ರಸ್ತೆ ಬದಿ ಕಸಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕುಶಾಲನಗರ ಗಡಿ ಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ಗೌಡ ಸಮಾಜ, ಮಹಿಳಾ ಘಟಕ ಹಾಗೂ ಗೌಡ ಯುವಕ ಸಂಘಗಳ ಸಹಯೋಗದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಕುಶಾಲನಗರ ಪಟ್ಟಣ ಸೇರಿದಂತೆ ರಸ್ತೆಯ ಉದ್ದಗಲಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಗುಡ್ಡೆಹೊಸೂರು ಗ್ರಾಮದಲ್ಲಿ ಅಲ್ಲಿನ ಗೌಡ ಸಮಾಜದವರು ಕಾರ್ಯಕ್ಕೆ ಸಾಥ್ ನೀಡಿದರು. ಗದ್ದೆಹಳ್ಳದಿಂದ ಚೆಟಳ್ಳಿಯ ಚೇರಳ ಗೌಡ ಸಮಾಜದವರು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದರು. ಬೋಯಿಕೇರಿಯಿಂದ ಮಡಿಕೇರಿವರೆಗೆ ಮಕ್ಕಂದೂರು ಗೌಡ ಸಮಾಜದವರು ಶ್ರಮದಾನ ಮಾಡಿದರು.
ಮಡಿಕೇರಿಯಲ್ಲಿ ಚಾಲನೆ
ಮಡಿಕೇರಿಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜ, ಕೊಡಗುಗೌಡ ವಿದ್ಯಾ ಸಂಘ, ಕೊಡಗು ಗೌಡ ಯುವ ವೇದಿಕೆ, ಗೌಡ ಮಹಿಳಾ ಒಕ್ಕೂಟ, ಗೌಡ ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಗೌಡ ಒಕ್ಕೂಟಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸ್ವಾತಂತ್ರö್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಪ್ರತಿಮೆ ಆವರಣ ಹಾಗೂ ಸನಿಹದಲ್ಲಿರುವ ರಾಷ್ಟçದ ಪ್ರಪ್ರಥಮ ಮಹಾ ದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ನಂತರ ಜ. ತಿಮ್ಮಯ್ಯ ವೃತ್ತದವರೆಗೆ ಎಲ್ಲರೂ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಯುವ
ವೇದಿಕೆ ಅಧ್ಯಕ್ಷ
(ಮೊದಲ ಪುಟದಿಂದ) ಪೈಕೇರ ಮನೋಹರ್ ಮಾದಪ್ಪ, ಉಪಾಧ್ಯಕ್ಷ ಬಾಳಾಡಿ ಮನೋಜ್, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಮಹಿಳಾ ಒಕ್ಕೂಟದ ಮಾಜಿ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಕೆಡಿಕೆ ಸಹಕಾರ ಸಂಘದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ತೂಟೇರ ವೆಂಕಟರಮಣ, ಮಾಜಿ ಸೈನಿಕರ ಸಂಘದ ಚೌಕಿ ರಘು ತಿಮ್ಮಯ್ಯ, ಸ್ಕೌಟ್ ಮತ್ತು ಗೈಡ್ಸ್ನ ಪುದಿಯನೆರವನ ರೇವತಿ ರಮೇಶ್, ನಗರಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ಒಕ್ಕೂಟದ ಪೇರಿಯನ ಉದಯ, ತಳೂರು ದಿನೇಶ್ ಇತರರು ಪಾಲ್ಗೊಂಡಿದ್ದರು.
ಯುವ ವೇದಿಕೆ ಭಾಗಿ
ಜ. ತಿಮ್ಮಯ್ಯ ವೃತ್ತದಿಂದ ಕೊಡಗು ಗೌಡ ಯುವ ವೇದಿಕೆಯವರು ಶ್ರಮದಾನ ಮುಂದುವರಿಸಿದರು. ಮಂಗಳೂರು ರಸ್ತೆಯುದ್ದಕ್ಕೂ ರಾಶಿ ಬಿದ್ದಿದ್ದ ಕಸ, ಮದ್ಯದ ಬಾಟಲಿಗಳನ್ನು ಹೆಕ್ಕಿ ಸ್ವಚ್ಛ ಮಾಡಿದರು. ಭಾಗಮಂಡಲ ರಸ್ತೆಯ ತಾಳತ್ಮನೆವರೆಗೆ ಯುವ ವೇದಿಕೆಯವರು ಶ್ರಮದಾನ ಮಾಡಿದರು.
ಅಲ್ಲಿಂದ ಬೆಟ್ಟಗೇರಿವರೆಗೆ ಮದೆನಾಡು ಗ್ರಾಮದವರು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದರು. ಗೌಡ ಜನಾಂಗದವರು ಸೇರಿದಂತೆ ಇತರರು ಕೂಡ ಈ ಒಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮುಂದಾಳತ್ವದಲ್ಲಿ ಶ್ರಮದಾನ ನಡೆಯಿತು. ಭಾಗಮಂಡಲ ಅತಿಥಿ ಗೃಹದಿಂದ ತಲಕಾವೇರಿವರೆಗೆ ಭಾಗಮಂಡಲದ ಗ್ರಾಮಸ್ಥರು ಶ್ರಮದಾನ ಮಾಡಿದರು.ಕುಶಾಲನಗರ: ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕೊಡಗು ಗೌಡ ಫೆಡರೇಷನ್ ಮಾದರಿ ಕೆಲಸ ಮಾಡುತ್ತಿದೆ ಎಂದು ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ ಶ್ಲಾಘಿಸಿದರು. ಫೆಡರೇಷನ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕೊಡಗಿನ ಗಡಿ ಕೊಪ್ಪ ಗೇಟ್ನಿಂದ ಕಾವೇರಿ ಉಗಮ ಸ್ಥಾನ ತಲಕಾವೇರಿ ತನಕದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೌಡ ಸಮುದಾಯ ಸಮಾಜಕ್ಕೆ ಹಲವು ರೀತಿಯ ಕೊಡುಗೆ ನೀಡುತ್ತಿದೆ. ಇದೀಗ ಕಾವೇರಿ ತುಲಾ ಸಂಕ್ರಮಣದ ನಂತರ ಜಿಲ್ಲೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ಜಾಗೃತಿ ಕಾರ್ಯವನ್ನು ನಡೆಸುತ್ತಿರುವುದು ಉತ್ತಮ ಕೆಲಸವಾಗಿದೆ. ಕುಶಾಲನಗರ ಗೌಡ ಸಮಾಜದ ಮೂಲಕ ಪಟ್ಟಣದ ಒಂದು ಪಾರ್ಕ್ ಅಭಿವೃದ್ಧಿ ಪಡಿಸಲು ಸಮಾಜದ ಪ್ರಮುಖರು ಮುಂದಾಗುವAತೆ ಈ ಸಂದರ್ಭ ಕರೆ ನೀಡಿದರು.
ಗೌಡ ಫೆಡರೇಷನ್ ಖಜಾಂಚಿ ಕರಂದ್ಲಾಜೆ ಆನಂದ ಮಾತನಾಡಿ ಗೌಡ ಫೆಡರೇಶನ್ ಜೊತೆ ವಿವಿಧ ಗೌಡ ಸಮಾಜಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ. ಆಯಾಯ ಪ್ರದೇಶದಲ್ಲಿ ಅಲ್ಲಲ್ಲಿಯ ಗೌಡ ಸಮಾಜಗಳು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದರು. ಕುಡಾ ಅಧ್ಯಕ್ಷ ಎಂ.ಎA. ಚರಣ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಫೆಡರೇಷನ್ ನಿರ್ದೇಶಕ ಚಿಲ್ಲನ ಗಣಿಪ್ರಸಾದ್, ಗೌಡ ಸಮಾಜ ನಿರ್ದೇಶಕರಾದ ಪಟ್ಟಂದಿ ಬೀನಾ, ಎಂ.ಕೆ. ಗಣೇಶ್, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಪದ್ಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಅಚ್ಚಾಂಡೀರ ಲತಾ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಲಯನ್ಸ್ ಕ್ಲಬ್ ಅಧ್ಯಕ್ಷ ಚಿಣ್ಣಪ್ಪ, ಸುಮನ್ ಹಾಗೂ ಸಮಾಜದ ಪ್ರಮುಖರು ಈ ವೇಳೆ ಇದ್ದರು.
ಗುಡ್ಡೆಹೊಸೂರು: ಗೌಡ ಸಮಾಜಗಳ ಒಕ್ಕೂಟ, ಕುಶಾಲನಗರ ಗೌಡಸಮಾಜ, ಗೌಡ ಯುವಕ ಸಂಘ ಹಾಗೂ ಜಿಲ್ಲೆಯ ಎಲ್ಲಾ ಗೌಡ ಸಮಾಜಗಳ ಸಹಯೋಗದೊಂದಿಗೆ ಕುಶಾಲನಗರದಿಂದ ತಲಕಾವೇರಿ ತನಕ ರಸ್ತೆ ಬದಿಯ ಕಸವನ್ನು ತೆಗೆದು ಸ್ವಚ್ಛಮಾಡುವ ಕಾರ್ಯ ನಡೆಸಲಾಯಿತು.
ಈ ಕಾರ್ಯಕ್ಕೆ ಗುಡ್ಡೆಹೊಸೂರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಚಾಲನೆ ನೀಡಿದರು. ಗೌಡ ಸಮಾಜದ ಅಧ್ಯಕ್ಷ ನಡುಗಲ್ಲು ಬಾಲಕೃಷ್ಣ, ಉಪಾಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಕುಡೆಕಲ್ ನಿತ್ಯನಂದ, ಕುಡೆಕಲ್ ಶೀಲಾ ಗುರುಪ್ರಸಾದ್, ಕೆದಂಬಾಡಿ ಅಶೋಕ್, ಕುಡೆಕಲ್ ಗಣೇಶ್, ಕಾರ್ಯದರ್ಶಿ ಹೇಮಂತ್, ಗುಡ್ಡೆಹೊಸೂರು ಗೌಡ ಸಮಾಜದ ನಾಪೋಕ್ಲು: ಕೊಡಗು ಗೌಡ ಫೆಡರೇಶನ್ ವತಿಯಿಂದ ಕೊಡಗಿನ ಎಲ್ಲಾ ಗೌಡ ಸಮಾಜಗಳು ಕುಶಾಲನಗರದಿಂದ ತಲಕಾವೇರಿವರೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಚೇರಂಬಾಣೆ ಗೌಡ ಸಮಾಜದ ವತಿಯಿಂದ ಬೆಟ್ಟಗೇರಿಯಿಂದ ಕೋಪಟ್ಟಿವರೆಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಸ್ವಚ್ಛತಾ ಕಾರ್ಯಕ್ಕೆ ನಾಪೋಕ್ಲು ಬೆಟ್ಟಗೇರಿ ಕೂಡು ರಸ್ತೆಯಲ್ಲಿ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ ಚಾಲನೆ ನೀಡಿದರು. ಕಾರುಗುಂದ, ಕಡಿಯತ್ತೂರು, ಬೆಂಗೂರು, ಕೊಟ್ಟೂರು, ಕೋಪಟ್ಟಿ, ಬಾಡಗ ಸೇರಿದಂತೆ ಸುಮಾರು ೧೮ ಗ್ರಾಮಗಳಿಂದ ಸಮಾಜ ಬಾಂಧವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಮುಕ್ಕಾಟಿ ನಾಣಯ್ಯ, ನಿರ್ದೇಶಕರಾದ ಕೊರನ ಮೋಹನ್, ಎಡಿಕೇರಿ ಪ್ರವೀಣ್, ನೈಯಣಿ ಹೇಮಲತಾ, ಮುಕ್ಕಾಟಿ ವೇದಾವತಿ, ಹೊಸೋಕ್ಲು ಮೊಣ್ಣಪ್ಪ, ಕಡ್ಲೇರ ತುಳಸಿ ಮೋಹನ್, ಮುಕ್ಕಾಟಿ ಸುಗು, ವಿ.ಟಿ.ಗಿರಿ, ಬೈಮನ ಗನೇಶ್, ಕೊಡಪಾಲು ಆಕಾಶ್ ಗಣಪತಿ ಮತ್ತಿತರರು ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ನಾಡು ಗೌಡ ಸಂಘ ಇದರ ವತಿಯಿಂದ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಗೌಡ ಸಂಘ ಸುಂಟಿಕೊಪ್ಪ ನಾಡು ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸುಂಟಿಕೊಪ್ಪ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊAಡ ಸ್ವಚ್ಛತಾ ಕಾರ್ಯಕ್ರಮ ಸುಂಟಿಕೊಪ್ಪ ಪಟ್ಟಣ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ಕೆದಕಲ್ ಗ್ರಾಮದವರೆಗೆ ಬಿದ್ದಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗೌಡ ಸಂಘ ಸುಂಟಿಕೊಪ್ಪ ನಾಡು ಇದರ ಅಧ್ಯಕ್ಷರಾದ ಯಂಕನ ಉಲ್ಲಾಸ್, ಸಂಘದ ಸದಸ್ಯರು ಹಾಜರಿದ್ದರು.