ಮಡಿಕೇರಿ, ಅ. ೧೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ಉದ್ಘಾಟಿಸುವರು. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ವಿ.ವಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಎನ್.ಕೆ. ಲೋಲಾಕ್ಷಿ ಉಪನ್ಯಾಸ ನೀಡುವರು. ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಪ್ರಶಸ್ತಿ ಪ್ರದಾನ ಮಾಡುವರು. ತಾಲೂಕು ಅಧ್ಯಕ್ಷರುಗಳಾದ ಮಡಿಕೇರಿಯ ಅಂಬೆಕಲ್ ನವೀನ್, ಸೋಮವಾರಪೇಟೆಯ ಎಸ್.ಡಿ. ವಿಜೇತ್, ಕುಶಾಲನಗರದ ಕೆ.ಎಸ್. ಮೂರ್ತಿ, ವೀರಾಜಪೇಟೆಯ ರಾಜೇಶ್ ಪದ್ಮನಾಭ, ಪೊನ್ನಂಪೇಟೆಯ ಕೋಳೆರ ದಯಾ ಚಂಗಪ್ಪ ಉಪಸ್ಥಿತರಿರುವರು.