ಮಡಿಕೇರಿ, ಅ. ೧೮: ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕದ ಕಚೇರಿ ಭಾಗಮಂಡಲದಲ್ಲಿ ಉದ್ಘಾಟನೆಗೊಂಡಿತು.
ಪಕ್ಷದ ಕಾನೂನು ಸಲಹೆಗಾರ ಹಾಗೂ ಹಿರಿಯ ವಕೀಲ ಕೆ.ಪಿ.ಬಾಲಸುಬ್ರಮಣ್ಯ ಅವರು ಕಚೇರಿಯನ್ನು ಉದ್ಘಾಟಿಸಿ ಶುಭ ಕೋರಿದರು.
ಆಪ್ನ ಸಂಯೋಜಕ ಕೋಳಿಬೈಲು ಚಿನ್ನಪ್ಪ ವೆಂಕಟೇಶ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಗ್ರಾಮ ಸಂಪರ್ಕ ಕಾರ್ಯಕ್ರಮ ಯಶಸ್ಸು ಕಂಡಿದೆ. ಇದೀಗ ಕಚೇರಿಯನ್ನು ಉದ್ಘಾಟಿಸಿದ್ದು, ಪಕ್ಷ ಸಂಘಟನೆಗೆ ಉತ್ತಮ ಸ್ಪಂದನ ದೊರೆಯುತ್ತಿದೆ ಎಂದರು.
ರಾಜಕೀಯ ಸಲಹೆಗಾರ ಎಸ್.ಬಿ. ಉದಯ್ ಕುಮಾರ್ ಮಾತನಾಡಿದರು. ಮತ್ತೊಬ್ಬ ಸಂಯೋಜಕ ಎಂ.ಕೆ. ಅಪ್ಪಯ್ಯ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.