ಶ್ರೀಮಂಗಲ, ಅ. ೧೮: ಕಾವೇರಿ ತೀರ್ಥೋದ್ಭವ ಹಿನ್ನೆಲೆ ವೀರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು ೫೮ ಕೀ.ಮಿ. ಯುವಕರು ಪಾದಯಾತ್ರೆ ಮಾಡಿದರು.
ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಮುರುವಂಡ ಸವನ್ ಸೋಮಣ್ಣ, ಚೆಟ್ಟಿಮಾಡ ಸಜನ್ ಕುಟ್ಟಪ್ಪ, ಚೆಟ್ಟೋಳಿರ ಶರತ್ ಸೋಮಣ್ಣ, ಕಾಳಮಂಡ ರಾಬಿನ್ ತೀರ್ಥ ಉದ್ಭವ ಹಿನ್ನೆಲೆ ಭಾನುವಾರ ಮುಂಜಾನೆಯಿAದಲೇ ವೀರಾಜಪೇಟೆಯಿಂದ ಪಾದಯಾತ್ರೆ ಕೈಗೊಂಡಿದ್ದರು. ವೀರಾಜಪೇಟೆ, ಕಡಂಗ, ಬಾವಲಿ, ನೆಲಜಿ ಮೂಲಕ ಭಾಗಮಂಡಲಕ್ಕೆ ಭಾನುವಾರ ಸಂಜೆ ರಾತ್ರಿ ೮.೩೦ಕ್ಕೆ ತಲುಪಿದ ಯುವಕರು ಸೋಮವಾರ ಭಾಗಮಂಡಲದಿAದ ಎಲ್ಲರೊಂದಿಗೆ ಪಾದಯಾತ್ರೆ ಮುಂದುವರೆಸಿ ತೀರ್ಥೋದ್ಭವ ಮುನ್ನ ತಲಕಾವೇರಿ ತಲುಪಿದರು. ಕಳೆದ ವರ್ಷ ಮುರುವಂಡ ಸವನ್ ಸೋಮಣ್ಣ ಏಕಾಂಗಿಯಾಗಿ ಪಾದಯಾತ್ರೆಯನ್ನು ಗೋಣಿಕೊಪ್ಪ ಸಮೀಪ ಹಾತೂರಿನಿಂದ ತಲಕಾವೇರಿವರೆಗೆ ಕೈಗೊಂಡಿದ್ದರು.