ಮಡಿಕೇರಿ, ಅ. ೧೮: ವರ್ಷಕ್ಕೊಮ್ಮೆ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿಯ ತೀರ್ಥವನ್ನು ವಿವಿಧ ಸಂಘಟನೆಗಳು ವಿತರಿಸುವ ಕಾರ್ಯ ನಡೆಸಿದವು. ತಲಕಾವೇರಿಗೆ ತೆರಳಿ ತೀರ್ಥ ಪಡೆದು ಅದಕ್ಕೆ ಪೂಜೆ ನೆರವೇರಿಸಿ ವಾಹನಗಳ ಮೂಲಕ ಕೊಂಡೊಯ್ದು ಜನರಿಗೆ ಪವಿತ್ರ ತೀರ್ಥ ವಿತರಿಸಿದರು. ಮಡಿಕೇರಿ ನಗರದ ಶ್ರೀ ಕಾವೇರಿ ಭಕ್ತ ಮಂಡಳಿ ವತಿಯಿಂದ ನಗರದಲ್ಲಿ ಕಾವೇರಿ ತೀರ್ಥ ವಿತರಣೆ ನಡೆಯಿತು.ಸೋಮವಾರಪೇಟೆ: ತಲಕಾವೇರಿಯಿಂದ ತರಲಾದ ಪವಿತ್ರ ಕಾವೇರಿ ತೀರ್ಥವನ್ನು ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗದಿಂದ ಸಾರ್ವಜನಿಕರಿಗೆ ವಿತರಿಸಲಾಯಿತು.

ನಿನ್ನೆ ದಿನ ತಲಕಾವೇರಿಗೆ ತೆರಳಿದ್ದ ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗದ ಅಧ್ಯಕ್ಷ ನಾಗರಾಜ್ ಸೇರಿದಂತೆ ಪದಾಧಿಕಾರಿಗಳು, ಕಾವೇರಿ ತೀರ್ಥವನ್ನು ಪಟ್ಟಣಕ್ಕೆ ತಂದಿದ್ದು, ಇಂದು ಬೆಳಿಗ್ಗೆ ಇಲ್ಲಿನ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಜೇಸೀ ವೇದಿಕೆಯಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಿದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದ ಸಾವಿರಾರು ಮಂದಿ ತೀರ್ಥವನ್ನು ಪಡೆದುಕೊಂಡರು. ಈ ಸಂದರ್ಭ ಅಭಿಮಾನಿಗಳ ಬಳಗದ ರಾಜಪ್ಪ, ಅಜಯ್, ಪ್ರಮುಖರಾದ ಕಾಟ್ನಮನೆ ಗಿರೀಶ್, ಹರಪಳ್ಳಿ ಅಶ್ವಥ್, ವಿರೂಪಾಕ್ಷ, ಪ್ರಣಿತ್, ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಶ್ರೀಮಂಗಲ: ಕ್‌ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗ ಪೊನ್ನಂಪೇಟೆ ವತಿಯಿಂದ ಮಂಗಳವಾರ ಪೊನ್ನಂಪೇಟೆ ಪಟ್ಟಣದಲ್ಲಿ ಕಾವೇರಿ ತೀರ್ಥವನ್ನು ನೂರಾರು ಭಕ್ತಾದಿಗಳಿಗೆ ವಿತರಿಸಲಾಯಿತು. ಸೋಮವಾರ ರಾತ್ರಿ ತಲಕಾವೇರಿಯಿಂದ ವಾಹನದಲ್ಲಿ ಟ್ಯಾಂಕ್ ಮೂಲಕ ತೀರ್ಥವನ್ನು ತರಲಾಗಿತ್ತು. ಈ ಸಂದರ್ಭ ಬಳಗದ ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಅಜ್ಜಿಕುಟ್ಟಿರ ರಂಜಿ, ಅಜ್ಜಿಕುಟ್ಟಿರ ಶುಭ ಮತ್ತಿತರರು ಹಾಜರಿದ್ದರು.

ವೀರಾಜಪೇಟೆ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೀರಾಜಪೇಟೆ ಹಿಂದೂ ಅಗ್ನಿದಳದ ವತಿಯಿಂದ ಪವಿತ್ರ ಕಾವೇರಿ ತೀರ್ಥ ವಿತರಣೆ ನಡೆಯಿತು. ತೀರ್ಥವನ್ನು ತಲಕಾವೇರಿಯಿಂದ ವೀರಾಜಪೇಟೆಗೆ ತಂದು ಮಂಗಳವಾರ ಬೆಳಿಗ್ಗೆ ವೀರಾಜಪೇಟೆ ನಗರದ ಎಲ್ಲಾ ಮನೆಗಳಿಗೆ ಕಾವೇರಿ ತೀರ್ಥವನ್ನು ಹಿಂದೂ ಅಗ್ನಿದಳದ ಅಧ್ಯಕ್ಷ ಟಿ.ಪಿ. ಕೃಷ್ಣ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ವೀರಾಜಪೇಟೆ ಕಾವೇರಿ ತುಲಾ ಚೆಟ್ಟಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚೆಟ್ಟಳ್ಳಿಯಲ್ಲಿ ಕಾವೇರಿ ತೀರ್ಥ ವಿತರಣೆ ನಡೆಯಿತು. ಸಹಕಾರ ಸಂಘದ ಮುಂದೆ ಪ್ರತಿಷ್ಠಾಪಿಸಲಾಗಿ ರುವ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಅಲಂಕಾರದೊAದಿಗೆ ಅರ್ಚಕರು ಕಾವೇರಿ ಸಂಕ್ರಮಣದ ವಿಶೇಷ ಪೂಜೆ ಸಲ್ಲಿಸಿ ನಂತರ ತೀರ್ಥ ವಿತರಿಸಲಾಯಿತು.

ಗೋಣಿಕೊಪ್ಪಲು: ಅರುವತ್ತೋಕ್ಕಲು, ಕಾಫಿ ಬೋರ್ಡ್ ಸಮೀಪದ ಕಾಡ್ಲಯ್ಯಪ್ಪ ದಸರಾ ಸಮಿತಿಯ ವತಿಯಿಂದ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಸಮಿತಿಯ ಅಧ್ಯಕ್ಷ ಅಜ್ಜಿಕುಟ್ಟಿರ ಸಜನ್‌ಚಂಗಪ್ಪ ಮುಂದಾಳತ್ವದಲ್ಲಿ ತಲಕಾವೇರಿಯಿಂದ ತರಲಾಗಿದ್ದ ತೀರ್ಥ ಪ್ರಸಾದವನ್ನು ಮುಂಜಾನೆಯಿAದಲೇ ನಾಗರಿಕರಿಗೆ ವಿತರಿಸಲಾಯಿತು.

ಕಳೆದ ಕೆಲವು ವರ್ಷಗಳಿಂದ ತೀರ್ಥ ಪ್ರಸಾದವನ್ನು ವಿತರಿಸಲು ಕೊರೊನಾ ಮಹಾಮಾರಿ ಅಡ್ಡಿಯಾಗಿತ್ತು. ಈ ಬಾರಿ ಈ ಪುಣ್ಯ ಕಾರ್ಯವನ್ನು ಆರಂಭಿಸಿದ್ದೇವೆAದು ಸಜನ್ ಚಂಗಪ್ಪ ತಿಳಿಸಿದರು. ಈ ವೇಳೆ ಸಮಿತಿಯ ಕಾರ್ಯದರ್ಶಿ ಕಂದಾ ದೇವಯ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು.ಮಾದಾಪುರ: ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಮಾದಾಪುರದ ಎಫ್‌ಎಂಸಿ ಬಡಾವಣೆಯಲ್ಲಿ ಕಾವೇರಿ ಸಂಕ್ರಮಣದ ಪವಿತ್ರ ತೀರ್ಥವನ್ನು ಬಡಾವಣೆಯ ಜನರಿಗೆ ಹಂಚಲಾಯಿತು.