ಗೋಣಿಕೊಪ್ಪಲು. ಅ. ೧೮: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಾಲಕ ಸಮೀರ್ ಬಂಧಿತ ಆರೋಪಿ. ಸ್ವರಾಜ್ ಮಜ್ದಾ ವಾಹನದಲ್ಲಿ ಹುದಿಕೇರಿಯಿಂದ ವೀರಾಜಪೇಟೆಗೆ ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಹೈಸೊಡ್ಲೂರುವಿನಲ್ಲಿ ದಾಳಿ ನಡೆಸಿದ ಪೊಲೀಸರು ಅಂದಾಜು ಮೂರುವರೆ ಲಕ್ಷದ ಬೀಟೆ ಮರದ ನಾಟಗಳನ್ನು ಮತ್ತು ಮೂರು ಲಕ್ಷ ಮೌಲ್ಯದ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಅಧೀಕ್ಷಕರಾದ ಎಂ.ಎ. ಅಯ್ಯಪ್ಪ ನಿರ್ದೇಶನದ ಮೇರೆಗೆ ಹಾಗೂ ವೀರಾಜಪೇಟೆ ಉಪಾಧೀಕ್ಷಕ ನಿರಂಜನ್ ರಾಜೆ ಅರಸು ರವರ ಮಾರ್ಗದರ್ಶನದಲ್ಲಿ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಠಾಣಾಧಿಕಾರಿ ಸಾಲ್ಡನ್, ಸಿಬ್ಬಂದಿ ಗಳಾದ ಎಂ.ಕೆ. ಖಾಲೀದ್, ಬಿ.ಟಿ. ಮಂಜುನಾಥ್, ಶಿವಪ್ಪ ಎ., ಯೋಗೇಶ್, ಚಾಲಕ ರಾಮಲಿಂಗ ಇದ್ದರು.