ಕುಶಾಲನಗರ, ಅ. ೧೮: ಕುಶಾಲನಗರ ಆಟೋಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಈ ಸಂದರ್ಭ ಪಟ್ಟಣದ ಕೆಲವು ಆಟೋ ನಿಲುಗಡೆ ತಾಣಗಳಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವರ್ಷ ಸಂಘದ ನಿರ್ಣಯದಂತೆ ಕುಶಾಲನಗರದಲ್ಲಿ ಸಂಘದ ಆಶ್ರಯದಲ್ಲಿ ಮಾತ್ರ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಸAಘದ ಕಾರ್ಯದರ್ಶಿ ಮಂಜು ಬೆಳ್ಳುಳ್ಳಿ ಮಾತನಾಡಿ, ಪಟ್ಟಣದ ಎಲ್ಲಾ ಆಟೋಚಾಲಕರು ಸಂಘದ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು. ಪ್ರತ್ಯೇಕವಾಗಿ ನಡೆಸುವ ಆಟೋ ನಿಲ್ದಾಣಗಳ ಕಾರ್ಯಕ್ರಮ ಕೈಬಿಡಬೇಕು ಎಂದು ಕೋರಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ದೇವರಾಜ್ (ಜವರ), ಗೌರವ ಅಧ್ಯಕ್ಷ ಕೆ.ಟಿ. ಯೋಗೇಶ್, ಎಂ. ಮಹೇಶ್ ಇದ್ದರು.