ಮಡಿಕೇರಿ, ಅ. ೧೮: ಗ್ರಾಮೀಣ ಪ್ರದೇಶದ ಬಡ ರೋಗಿಗಳ ಪಾಲಿನ ಆಶಾಕಿರಣವಾಗಿದ್ದ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗುತ್ತಿದೆ. ನ.೧ರಿಂದ ಯೋಜನೆಗೆ ಸದಸ್ಯರ ನೋಂದಣಿ ಶುರುವಾಗಲಿದೆ. ಸುಮಾರು ೧೬೫೦ ಬಗೆಯ ಕಾಯಿಲೆಗಳಿಗೆ ಯಶಸ್ವಿನಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಸಿಗಲಿದೆ.
೨೦೧೮ರ ಮೇ ೩೧ಕ್ಕೆ ರದ್ದಾಗಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಪರಿಷ್ಕರಿಸಿರುವ ರಾಜ್ಯ ಸರಕಾರ ಮರು ಜಾರಿ ಮಾಡಿ ಆದೇಶ ಹೊರಡಿಸಿದೆ. ಈ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ರೈತರು ಮತ್ತು ಸಹಕಾರಿ ಸಂಘಗಳಿAದ ಭಾರಿ ಬೇಡಿಕೆ ಇತ್ತು. ಹಾಗಾಗಿ ೨೦೨೨-೨೩ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಘೋಷಣೆ ಮಾಡಿದ್ದರು. ಇದಕ್ಕಾಗಿ ರೂ. ೩೦೦ ಕೋಟಿ ತೆಗೆದಿಡಲಾಗಿದೆ. ಪರಿಷ್ಕೃತ ಯೋಜನೆಯಡಿ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ ರೂ.೫ ಲಕ್ಷವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
ಯಶಸ್ವಿನಿ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರಕಾರಿ ಆಸ್ಪತ್ರೆಯ ಅನುಮತಿ ಅಗತ್ಯವಿಲ್ಲ. ಇದರಿಂದಾಗಿ ಸಮಯದ ಉಳಿತಾಯ ಆಗುತ್ತದೆ. ಜೊತೆಗೆ ಪರಿಣಾಮಕಾರಿ ಶಸ್ತç ಚಿಕಿತ್ಸೆ ಸೂಕ್ತ ಕಾಲದಲ್ಲಿ ಸಿಗುತ್ತದೆ. ರಾಜ್ಯದ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗಲಿದೆ. ಮೊದಲೇ ಹಣ ಕಟ್ಟಿ ದಾಖಲಾಗ ಬೇಕು ಎನ್ನುವ ಸಂಕಷ್ಟದಿAದಲೂ ಮುಕ್ತಿ ಸಿಕ್ಕಂತಾಗುತ್ತದೆ.
ಸಹಕಾರಿ ಸಂಘ, ಸಹಕಾರಿ ಬ್ಯಾಂಕ್ಗಳ ರೈತ ಸದಸ್ಯರಲ್ಲದೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರೂ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ. ಯೋಜನೆ ಅಡಿಯಲ್ಲಿ ನೋಂದಾಯಿತರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗುತ್ತದೆ.
ಸಹಕಾರಿ ಸಂಘಗಳ ಸದಸ್ಯರಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ೨೦೦೩ ರಲ್ಲಿ ರಾಜ್ಯ ಸರಕಾರ ಯಶಸ್ವಿನಿ ಯೋಜನೆ ಆರಂಭಿಸಿತ್ತು. ಇದು ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ‘ಸ್ವಯಂ-ನಿಧಿ ಶಸ್ತçಚಿಕಿತ್ಸಾ ಯೋಜನೆ'. ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತç ಚಿಕಿತ್ಸೆಯನ್ನು
(ಮೊದಲ ಪುಟದಿಂದ) ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು. ಆದರೆ ೨೦೧೮ರ ಜೂ.೧ಕ್ಕೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ‘ಯಶಸ್ವಿನಿ’ಯನ್ನು ವಿಲೀನಗೊಳಿಸಲಾಗಿತ್ತು.
ಅರ್ಹತೆ ಏನು ?
ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ನೋಂದಣಿಗೆ ಕನಿಷ್ಟ ೩ ತಿಂಗಳು ಮೊದಲು ಕುಟುಂಬದ ಒಬ್ಬ ಸದಸ್ಯ ಅರ್ಹ ಗ್ರಾಮೀಣ ಸಹಕಾರ ಸಂಘವೊAದರ ಸದಸ್ಯರಾಗಿರಬೇಕು. ಗ್ರಾಮೀಣ ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತಿçà ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿ ಆಗಬಹುದು.
ನೋಂದಣಿ ಹೇಗೆ ?
ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರ ನಾಲ್ಕು ಜನರ ಕುಟುಂಬಕ್ಕೆ ತಲಾ ೫೦೦ ರೂ. ಮತ್ತು ನಗರ ಪ್ರದೇಶದ ಸಹಕಾರಿಗಳಿಗೆ ೧೦೦೦ ರೂ. ವಂತಿಗೆ ನಿಗದಿಪಡಿಸಲಾಗಿದೆ. ನಾಲ್ಕು ಮಂದಿಗಿAತ ಹೆಚ್ಚಿನ ಸದಸ್ಯರು ಇರುವ ಗ್ರಾಮೀಣ ಕುಟುಂಬದ ಹೆಚ್ಚುವರಿ ಸದಸ್ಯರು ತಲಾ ರೂ.೧೦೦ ಮತ್ತು ನಗರ ಪ್ರದೇಶದ ಕುಟುಂಬದವರು ರೂ.೨೦೦ ವಂತಿಗೆ ಪಾವತಿಸಿ ಯೋಜನೆಗೆ ನೋಂದಾಯಿಸಬಹುದು. ಪ.ಜಾ. ಮತ್ತು ಪ.ಪಂ.ದ ಫಲಾನುಭವಿಗಳ ವಂತಿಗೆಯನ್ನು ಸರಕಾರವೇ ಭರಿಸುತ್ತದೆ. ಈ ಹಿಂದೆ ಗ್ರಾಮೀಣ ಭಾಗದವರಿಗೆ ರೂ.೩೦೦ ಮತ್ತು ನಗರ ಪ್ರದೇಶದವರಿಗೆ ರೂ.೭೧೦ ವಂತಿಗೆ ನಿಗದಿಯಾಗಿತ್ತು.
ಯಾವುದು ಒಳಪಡುವುದಿಲ್ಲ ?
ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟ ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತçಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್, ಸ್ಟಂಟ್, ಇಂಪ್ಲಾAಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಇಲ್ಲ. ಇವುಗಳ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳ ಹಾಗೂ ಶಸ್ತçಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು.
ಹೆಚ್ಚುವರಿ ಚಿಕಿತ್ಸೆ
ಸಾಮಾನ್ಯ ಹೆರಿಗೆ, ನವಜಾತ ಶಿಶುವಿನ ಶುಶ್ರೂಷೆ, ಕೃಷಿ ಉಪಕರಣಗಳಿಂದಾಗುವ ಅಪಘಾತಗಳು, ನೀರಿನಲ್ಲಿ ಮುಳುಗುವುದು, ನಾಯಿ ಕಡಿತ, ಹಾವು ಕಡಿತ, ಹೋರಿ ತಿವಿತ, ವಿದ್ಯುತ್ ಆಘಾತಗಳಿಗೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ಸಿಗುತ್ತದೆ.
-ಸುನಿಲ್ ಪೊನ್ನೇಟಿ