ಸೋಮವಾರಪೇಟೆ, ಅ. ೧೭: ಮೈಸೂರು ವಿಶ್ವವಿದ್ಯಾಲಯ, ಹೊಳೆನರಸೀಪುರ ಪಡವಲಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ವಿಭಾಗ, ಕೊಡಗು ನಾವು ಪ್ರತಿಷ್ಠಾನ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಿರುವ ಹತ್ತು ದಿನದ ಸಮಾಜಕಾರ್ಯ ಶಿಬಿರದಲ್ಲಿ ಸ್ಥಳೀಯ ಗ್ರಾಮ ನಿವಾಸಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣಾ ಕೃಷ್ಣಾನಂದ್, ಶಾಂತಳ್ಳಿ ಆರೋಗ್ಯ ಕೇಂದ್ರದ ಡಾ.ಚಾರುಲತಾ ಅವರುಗಳು ಆರೋಗ್ಯ ತಪಾಸಣೆ ಮಾಡಿದರು.
ವೈದ್ಯರ ಸಲಹೆ ಮೇರೆಗೆ ಬಾಣಂತಿಯರು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಮಕ್ಕಳ ಸ್ಥಳೀಯ ಗ್ರಾಮ ನಿವಾಸಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣಾ ಕೃಷ್ಣಾನಂದ್, ಶಾಂತಳ್ಳಿ ಆರೋಗ್ಯ ಕೇಂದ್ರದ ಡಾ.ಚಾರುಲತಾ ಅವರುಗಳು ಆರೋಗ್ಯ ತಪಾಸಣೆ ಮಾಡಿದರು.
ವೈದ್ಯರ ಸಲಹೆ ಮೇರೆಗೆ ಬಾಣಂತಿಯರು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಆರೋಗ್ಯವಂತರಿAದ ಸುಖಿ ಸಮಾಜ ನಿರ್ಮಾಣವಾಗುತ್ತದೆ ಎಂದು ಡಾ. ಸುಪರ್ಣಾ ಹೇಳಿದರು.
ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ ಗ್ರಾ. ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ, ಗ್ರಾಮಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಉದಯ್ ಕುಮಾರ್, ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಪ್ರಾಧ್ಯಾಪಕ ಸಂಜೀವ್ ಕುಮಾರ್, ದೀಪು, ರಿಯಾಜ್ ಅಹಮ್ಮದ್ ಸೇರಿದಂತೆ ಇತರರು ಇದ್ದರು.