ಕುಶಾಲನಗರ, ಅ. ೧೮: ಮುಂಬರುವ ನವೆಂಬರ್ ಮಾಸವನ್ನು ಕನ್ನಡೋತ್ಸವ ಮಾಸವನ್ನಾಗಿ ಆಚರಿಸಲು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದೆ.

ನಾಡ ಹಬ್ಬದ ಆಚರಣೆ ನೈಜ ಆಚರಣೆಯಾಗಬೇಕು. ವರ್ತಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು. ಆಟೋ ಹಾಗೂ ಇತರೇ ಕ್ಯಾಬ್‌ಗಳ ಚಾಲಕರು ತಮ್ಮ ತಮ್ಮ ವಾಹನಗಳ ಮೇಲೆ ಕನ್ನಡದ ಬಾವುಟಗಳನ್ನು ಹಾರಿಸುವ ಮೂಲಕ ಕನ್ನಡದ ಕವಿಗಳ ಸಾಹಿತ್ಯದ ಸಾಲುಗಳನ್ನು ಬರೆಸಿಕೊಳ್ಳಬೇಕು.

ಸಾರ್ವಜನಿಕರು ಇತರೇ ಭಾಷಿಗರೊಂದಿಗೆ ಸಂವಹನ ನಡೆಸುವಾಗ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಬೇಕು.

ತಾ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುª ಕೋಟಿ ಕಂಠ ಗಾಯನಕ್ಕೆ ಪ್ರತಿಯೊಬ್ಬರು ಧ್ವನಿಯಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮನವಿ ಮಾಡಿದ್ದು ನಾಡ ಹಬ್ಬದ ಉತ್ಸವವನ್ನು ನಿತ್ಯೋತ್ಸವವಾಗಿ ಆಚರಿಸಲು ಮನವಿ ಮಾಡಿದ್ದಾರೆ.