ಭಾಗಮಂಡಲ, ಅ. ೧೭: ಸುತ್ತಮುತ್ತಲೆಲ್ಲಾ ಮಂಜುಮುಸುಕಿದ ವಾತಾವರಣ., ಎಲ್ಲೆಲ್ಲೂ ಕೇಳಿ ಬರುತ್ತಿದ್ದ ಜಯಘೋಷ., ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ.., ಎಂಬಿತ್ಯಾದಿ ಉದ್ಘೋಷಗಳ ನಡುವೆ ಭಾವಪರವಶರಾಗಿ ಕಾದು ನಿಂತಿದ್ದ ಭಕ್ತ ಸಮೂಹಕ್ಕೆ ಜೀವನದಿ ಕಾವೇರಿ ಮಾತೆ ಪವಿತ್ರ ಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾಗಿ ದರುಶನ ನೀಡುವ ಮೂಲಕ ನಾಡಿನ ಜನತೆಯನ್ನು ಪುನೀತರನ್ನಾಗಿಸಿದಳು., ಕೊಡವರ ಕುಲದೇವತೆ, ಕೊಡಗಿನ ಜನರ ಆರಾಧ್ಯ ದೈವ, ಕರ್ನಾಟಕದ ಕಣ್ಮಣಿ, ದಕ್ಷಿಣ ಭಾರತದ ಜೀವನದಿ ಮಾತೆ ಕಾವೇರಿಯು ಭಕ್ತಾದಿಗಳ ಭಾವಪರವಶತೆಯ ನಡುವೆ ತೀರ್ಥರೂಪಿಣಿಯಾಗಿ ಗೋಚರಿಸಿದಳು. ಅರ್ಚಕವೃಂದದ ವೇದ ಮಂತ್ರಗಳ ನಡುವೆ ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡವಾಗಿ ರಾತ್ರಿ ೭.೨೨ ಗಂಟೆಗೆ ಮೇಷ ಲಗ್ನದಲ್ಲಿ ತೀರ್ಥೋದ್ಭವದ ಪುಣ್ಯ ಸನ್ನಿವೇಶದಲ್ಲಿ ಭಕ್ತ ಸಮೂಹದ ಜಯಘೋಷ ಮುಗಿಲು ಮುಟ್ಟಿತ್ತು. ಪಾಪ ನಾಶಿನಿಯ ದರುಶನಕ್ಕಾಗಿ ಜಿಲ್ಲೆ ಮಾತ್ರವಲ್ಲದೇ ವಿವಿಧೆಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ತಲಕಾವೇರಿಯತ್ತ ಭಕ್ತರು ತೆರಳುತ್ತಿದ್ದರು. ಪವಿತ್ರ ಕುಂಡಿಕೆಯಲ್ಲಿ ಸುಮಾರು ಸಂಜೆ ೫.೧೫ ರಿಂದ ಅರ್ಚಕ ವೃಂದದಿAದ ಪೂಜಾ ವಿಧಿ ವಿಧಾನಗಳು ಆರಂಭವಾದವು. ಅರ್ಚಕರಾದ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದಂತೆ. ಸಂಜೆ ೬.೧೫ ರ ಸುಮಾರಿಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅವರ ನೇತೃತ್ವದಲ್ಲಿ ಭಂಡಾರ ತರಲಾಯಿತು. ಕರವಲೆ ಭಗವತಿ ದೇವಾಲಯ ಸಮಿತಿ ಪ್ರಮುಖರು ಕುಂಡಿಕೆ ಬಳಿ ದುಡಿಕೊಟ್ಟು ಪಾಟ್ ಸಹಿತ ಕ್ಷೇತ್ರದ ಸುತ್ತಲೂ ಸಾಂಪ್ರದಾಯಿಕವಾದ ಧಿರಿಸು, ತಳಿಯತಕ್ಕಿ ಬೊಳಕು ಸಹಿತವಾಗಿ ಸ್ಥಳೀಯರು ಸೇರಿದಂತೆ ನೆರೆದಿದ್ದ ಎಲ್ಲಾ ಭಕ್ತರು ಕಾವೇರಿ ಮಾತೆಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರುಶನ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸುತ್ತಿದ್ದರು. ಪ್ರಾರಂಭದಲ್ಲಿ ತುಸು ಮಳೆ ಹನಿಯುತ್ತಿದ್ದರೂ ಬಳಿಕ ವಾತಾವರಣ ತಿಳಿಗೊಂಡಿತು.
ಪುಣ್ಯಸ್ನಾನ
ಭಕ್ತಾದಿಗಳು ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕೇಶಮುಂಡನ ಮಾಡಿಸಿಕೊಂಡು ಪುಣ್ಯ ಸ್ನಾನ ಮಾಡಿ ಪಿಂಡ ಪ್ರದಾನ ಕಾರ್ಯ ನೆರವೇರಿಸಿದರು. ಸಂಗಮ ತೀರದಲ್ಲಿದ್ದ ಭಿಕ್ಷುಕರಿಗೆ ಅಕ್ಕಿ, ಹಣ ದಾನ ಮಾಡಿದರು.
ಅನ್ನ ಸಂತರ್ಪಣೆ
ಭಾಗಮAಡಲ ಭಗಂಡೇಶ್ವರ ದೇವಾಲಯದಲ್ಲಿ ದೇವಾಲಯ ಸಮಿತಿಯಿಂದ ಎಂದಿನAತೆ ಅನ್ನದಾನ ನಡೆಯಿತು. ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ನಿರಂತರ ಅನ್ನ ಸಂತರ್ಪಣೆ ನಡೆಯಿತು.
ಬಿಗಿ ತಪಾಸಣೆ
ತಲಕಾವೇರಿಗೆ ಆಗಮಿಸುವ ಭಕ್ತಾದಿಗಳನ್ನು ತಲಕಾವೇರಿ ಸನ್ನಿಧಿಯ ದ್ವಾರದಲ್ಲಿ ಬಿಗಿ ತಪಾಸಣೆಗೆ ಒಳಪಡಿಸಲಾಗುತ್ತಿತ್ತು.
ಈ ಸಂದರ್ಭ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ,
(ಮೊದಲ ಪುಟದಿಂದ) ಮಾಜಿ ಸದಸ್ಯ ಶಾಂತೆಯAಡ ವೀಣಾ ಅಚ್ಚಯ್ಯ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ, ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕೆ.ಪಿ.ಸಿ.ಸಿ. ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ ಸೇರಿದಂತೆ ವಿವಿಧ ರಾಜಕೀಯ ಸಂಘಟನೆಗಳ ಪ್ರಮುಖರು ಹಾಜರಿದ್ದರು.
-ಚಿತ್ರ, ವರದಿ: ಉಜ್ವಲ್ ರಂಜಿತ್,
ಕುಯ್ಯಮುಡಿ ಸುನಿಲ್