ಮಡಿಕೇರಿ, ಅ. ೧೮: ಮಾತೆ ಕಾವೇರಿಯ ಪವಿತ್ರ ತೀರ್ಥೋದ್ಭವದ ಸಂಭ್ರಮದಲ್ಲಿರುವ ಕೊಡಗಿನಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಕಣಿಪೂಜೆ ಆಚರಿಸಲಾಯಿತು.
ಜಿಲ್ಲೆಯ ವಿವಿಧೆಡೆ ಕೊಡವ, ಕೊಡವ ಭಾಷಿಕ ಜನಾಂಗದವರು, ಗೌಡ ಜನಾಂಗ ಬಾಂಧವರು ಶ್ರದ್ಧಾಭಕ್ತಿಯಿಂದ ಕಾವೇರಿ ತಾಯಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸುವ ಮೂಲಕ ಕಣಿಪೂಜೆ ಆಚರಿಸಿ, ಕಾವೇರಿ ಮಾತೆಯನ್ನು ಪೂಜಿಸಿದರು.
ತೀರ್ಥೋದ್ಭವದ ಮರುದಿನ ಮನೆಗಳಲ್ಲಿ ಕೊಡಗಿನ ಕುಲದೇವಿ ಕಾವೇರಿ ತಾಯಿಯ ಸಾಂಕೇತಿಕ ಮೂರ್ತಿ ಅಥವಾ ಫೋಟೋಗಳಿಗೆ ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸುತ್ತಾರೆ. ಸ್ವತಃ ಕಾವೇರಿಗೆ ತೆರಳಿ ಪೂಜೆ ಸಲ್ಲಿಸಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ತಮ್ಮ ಮನೆಗಳಲ್ಲಿ ಕಾವೇರಿ ತಾಯಿಯ ವಿಗ್ರಹವನ್ನಿಟ್ಟು ಕಾವೇರಿ ತಾಯಿಯ ಸ್ಮರಣೆ ಮಾಡಿ, ಆಕೆಯನ್ನು ಮನೆಗೆ ಸ್ವಾಗತಿಸುವ ಸಂಭ್ರಮವೇ ಕಣಿಪೂಜೆ.
ಮುಂಜಾನೇ ಬೇಗನೆ ಎದ್ದ ಮನೆಯ ಮುತ್ತೆöÊದೆಯರು ಸ್ನಾನ ಮಾಡಿ ಶುಭ್ರವಾಗಿ ಬಟ್ಟೆ ತೊಟ್ಟು, ಶಾಸ್ತೊçÃಕ್ತವಾಗಿ ಕಾವೇರಿ ತಾಯಿಯ ಪೂಜೆ ಮಾಡಿದರು. ದಿನದ ವಿಶೇಷವಾಗಿ ಪೂಜೆ ಮಾಡಿ ತಂದ ನೀರಿನಿಂದ ಅಡುಗೆ ಮಾಡಿ, ದಿನದ ವಿಶೇಷ ಅಡುಗೆ ದೋಸೆ ಹಾಗೂ ಸಿಹಿಕುಂಬಳದಿAದ ಆಹಾರ ತಯಾರಿಸಿ ಮನೆ ಮುಂದೆ ಇಟ್ಟಿರುವ ಬೊತ್ತ್ಗೆ ಸಿಕ್ಕಿಸಿದರು. ಇದರೊಂದಿಗೆ ಇನ್ನೂ ಮೂರು ದೋಸೆಗಳನ್ನು ಒಂದು ಕುಡಿಬಾಳೆಯೆಲೆಯಲ್ಲಿಟ್ಟುಕೊಂಡು ಮನೆಯ ಗದ್ದೆಯ ಏರಿಯ ಮೇಲೆ ಹಾಕಲಾಗಿರುವ ಬೊತ್ತ್ಗೆ ಸಿಕ್ಕಿಸಿ ಹಬ್ಬ ಆಚರಿಸಿದರು.
ಪೂಜಾ ವಿಧಿವಿಧಾನಗಳ ನಂತರ ಕಣಿ ಪೂಜಿಸಿದ ಹೂಗಳನ್ನು ಹರಿಯುವ ನೀರಿನಲ್ಲಿ ಹಾಕುವರು. ಕೆಲವರು ಕಣಿಯನ್ನು ಎರಡು, ಮೂರು, ಐದು ದಿನಗಳವರೆಗೂ ಇಟ್ಟು, ಚಿನ್ನಾಭರಣಗಳನ್ನು ತೆಗೆದಿಟ್ಟು, ಹರಿಯುವ ನೀರಿನಲ್ಲಿ ಕಣಿಯನ್ನು ವಿಸರ್ಜಿಸುತ್ತಾರೆ. ಪೂಜೆ ನಂತರ ಕಿರಿಯರು ಮನೆಯ ಹಿರಿಯರ ಆಶೀರ್ವಾದವನ್ನು ಪಡೆದು, ದಿನದ ವಿಶೇಷ ಭೋಜನ ಸವಿದು ಸಂಭ್ರಮಿಸಿದರು.
ಸಿ.ಎನ್.ಸಿ. ವತಿಯಿಂದ
ದೇವಾಟ್ ಪರಂಬ್ ನರಮೇಧ ಸಮಾಧಿ ಸ್ಥಳದಲ್ಲಿ ಕಾವೇರಿ ತೊಲೆಯಾರ್ ಚಂಗ್ರಾAದಿ ಪ್ರಯುಕ್ತ ‘ಬೊತ್ತ್ ಕುತ್ತ÷್ವ’ ಕಾರ್ಯಕ್ರಮವನ್ನು ಸಿ.ಎನ್.ಸಿ. ವತಿಯಿಂದ ನಡೆಸಲಾಯಿತು. ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವದಲ್ಲಿ ಸಿ.ಎನ್.ಸಿ ಸದಸ್ಯರು ಇಂದು ದೇವಾಟ್ ಪರಂಬುವಿನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ನಿರ್ಗಮಿಸಿದ ಆತ್ಮಗಳಿಗೆ ಕಾವೇರಿ ತೀರ್ಥವನ್ನು ಅರ್ಪಿಸಿದರು. ದೋಸೆ ಮತ್ತು ಪುಟ್ಟ್ ನೈವೇಧ್ಯವನ್ನು ಶ್ರದ್ಧೆಯಿಂದ ಸಮರ್ಪಿಸಲಾಯಿತು.
ತಲಕಾವೇರಿ ತೀರ್ಥೋದ್ಭವದ ಮಾರನೇ ದಿನ ಬೊತ್ತ್ ಮತ್ತು ಬಳ್ಳಿಗೆ ದೋಸೆ - ಪುಟ್ಟ್ ಸಮರ್ಪಿಸುವ ಪದ್ಧತಿ ರೂಡಿಗತವಾಗಿದ್ದು ಅದರಂತೆ ಸಿ.ಎನ್.ಸಿ ವತಿಯಿಂದ ಕೂಡ ಬೊತ್ತ್ ಕುತ್ತ÷್ವ ಸಾಂಸ್ಕöÈತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಕೊಡವ ಲ್ಯಾಂಡ್ ಜಿಯೋ-ಪೊಲೊಟಿಕಲ್ ಅಟೋನಮಿ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ, ದೇವಾಟ್ಪರಂಬು ನರಮೇಧ ಸ್ಥಳದಲ್ಲಿ ಸ್ಮಾರಕ ನಿರ್ಮಾಣ, ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವುದು ಸೇರಿದಂತೆ ಇತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಈ ಸಂದರ್ಭ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ರಾಮಿ ನಾಣಯ್ಯ, ಜೈ, ಗಿರೀಶ್, ದಿನು, ಕುಶ, ಮನೋಜ್, ಉಮೇಶ್, ಬೋಪಣ್ಣ, ಸೂರಜ್, ಸತೀಶ್, ಕಾರ್ಯಪ್ಪ, ದೇವಯ್ಯ, ಚಿಣ್ಣಪ್ಪ, ಮಾಚಯ್ಯ ಭಾಗವಹಿಸಿದ್ದರು.