ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ
ಮುಂಬೈ, ಅ. ೧೮: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ. ರೋಜರ್ ಬಿನ್ನಿ ಭಾರತ ತಂಡದ ಮಾಜಿ ಆಟಗಾರರೂ ಆಗಿದ್ದು ೧೯೮೩ ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ. ಸೌರವ್ ಗಂಗೂಲಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐನ ೩೬ನೇ ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು. ಇನ್ನು ಬಿಸಿಸಿಐನ ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಯಲಿದ್ದಾರೆ. ೧೯೫೫ ಜುಲೈ ೧೯ ರಂದು ಜನಿಸಿದ ರೋಜರ್ ಬಿನ್ನಿ ೧೯೭೯ ರಿಂದ ೧೯೮೭ರವರೆಗೆ ಭಾರತ ಕ್ರಿಕೆಟ್ ತಂಡದಲ್ಲಿದ್ದರು.
ಕಳಪೆ ರಸ್ತೆಗಳಿಂದಾಗುವ ಅಪಘಾತಗಳಿಗೆ ಅಧಿಕಾರಿಗಳೇ ಹೊಣೆ
ನವದೆಹಲಿ, ಅ. ೧೮: ಕಳಪೆ ರಸ್ತೆ ಕಾಮಗಾರಿಗಳಿಂದಾಗಿ ಸಂಭವಿಸುವ ಯಾವುದೇ ಮಾರಣಾಂತಿಕ ಅಥವಾ ಗಂಭೀರ ಅಪಘಾತಗಳಿಗೆ ಅಧಿಕಾರಿ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಮಂಗಳವಾರ ಸುತ್ತೋಲೆ ಹೊರಡಿಸಿದೆ. ತಾತ್ಕಾಲಿಕ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಎನ್‌ಹೆಚ್ ಎಐ/ಐಇ/ಎಇಯ ಪ್ರತಿನಿಧಿಗಳಿಂದ ಕರ್ತವ್ಯ ಲೋಪವಾದರೆ. ಅವರ ನಿರ್ಲಕ್ಷö್ಯದಿಂದ ಬಳಕೆದಾರರ ಸುರಕ್ಷತೆಗೆ ಧಕ್ಕೆಯಾದರೆ ಅದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ರಸ್ತೆ ಗುರುತು, ರಸ್ತೆ ಸಂಕೇತಗಳು, ಕ್ರಾಶ್ ಬ್ಯಾರಿಯರ್ ಹಾಕಿರುವುದನ್ನೇ ಆಧಾರವಾಗಿಟ್ಟುಕೊಂಡು ಕಾಮಗಾರಿ ಪೂರ್ಣಗೊಳಿಸಿರುವ ಕುರಿತು ತಾತ್ಕಾಲಿಕ ಪ್ರಮಾಣಪತ್ರಗಳನ್ನು ನೀಡಲಾಗುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದು ಬಳಕೆದಾರರ ಸುರಕ್ಷತೆ ಬಗ್ಗೆ ರಾಜಿ ಮಾಡಿಕೊಂಡAತೆ ಮತ್ತು ಇದರಿಂದ ಪ್ರಾಧಿಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಸುತ್ತೋಲೆ ಹೇಳಿದೆ. "ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡುವ ಮೊದಲು ಯೋಜನಾ ಹೆದ್ದಾರಿಯಲ್ಲಿನ ರಸ್ತೆ ಸುರಕ್ಷತಾ ಕಾಮಗಾರಿಗಳು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡಿವೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಒಂದು ವೇಳೆ ಕಳಪೆ ರಸ್ತೆ ಕಾಮಗಾರಿಯಿಂದಾಗಿ ಸಂಭವಿಸುವ ಯಾವುದೇ ಮಾರಣಾಂತಿಕ / ಗಂಭೀರ ಅಪಘಾತಗಳಿಗೆ ಪ್ರಾದೇಶಿಕ ಅಧಿಕಾರಿಗಳು/ ಯೋಜನಾ ನಿರ್ದೇಶಕರು/ ಸಂಬAಧಪಟ್ಟ ಇಂಜಿನಿಯರ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಗೋದಿ ಹಾಗೂ ಸಾಸಿವೆಗೆ ಕನಿಷ್ಟ ಬೆಂಬಲ ಬೆಲೆ
ನವದೆಹಲಿ, ಅ. ೧೮: ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಕೇಂದ್ರ ಸರ್ಕಾರ ಪ್ರಸಕ್ತ ಬೆಳೆ ವರ್ಷದಲ್ಲಿ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಗೋಧಿ ಕ್ವಿಂಟಾಲ್‌ಗೆ ೧೧೦ ರೂ. ಮತ್ತು ಸಾಸಿವೆಗೆ ಕ್ವಿಂಟಾಲ್‌ಗೆ ೪೦೦ ರೂ.ಗಳನ್ನು ಹೆಚ್ಚಿಸಿದೆ. ಈ ಮೂಲಕ ಗೋಧಿಯನ್ನು ಕ್ವಿಂಟಾಲ್‌ಗೆ ೨,೧೨೫ ಕೊಟ್ಟು, ಪ್ರತಿ ಕ್ವಿಂಟಾಲ್ ಸಾಸಿವೆಯನ್ನು ೫,೪೫೦ ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಂಎಸ್‌ಪಿಗಳನ್ನು (ಕನಿಷ್ಟ ಬೆಂಬಲ ಬೆಲೆ) ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಂಎಸ್‌ಪಿ ಎನ್ನುವುದು ಸರ್ಕಾರವು ರೈತರಿಂದ ಧಾನ್ಯವನ್ನು ಖರೀದಿಸುವ ದರವಾಗಿದೆ. ಸದ್ಯ, ಸರ್ಕಾರವು ಖಾರಿಫ್ ಮತ್ತು ರಾಬಿ ಋತುಗಳಲ್ಲಿ ಬೆಳೆಯುವ ೨೩ ಬೆಳೆಗಳಿಗೆ ಎಂಎಸ್‌ಪಿಯನ್ನು ನಿಗದಿಪಡಿಸುತ್ತದೆ. ಖಾರಿಫ್ (ಬೇಸಿಗೆ) ಬೆಳೆಗಳ ಕೊಯ್ಲು ಮಾಡಿದ ತಕ್ಷಣ ರಾಬಿ (ಚಳಿಗಾಲ) ಬೆಳೆಗಳ ಬಿತ್ತನೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಗೋಧಿ ಮತ್ತು ಸಾಸಿವೆ ಪ್ರಮುಖ ರಾಬಿ ಬೆಳೆಗಳಾಗಿವೆ.
ಜಯಲಲಿತಾ ಸಾವು ಪ್ರಕರಣ - ತನಿಖೆಗೆ ಆದೇಶ
ಚೆನ್ನೆöÊ, ಅ. ೧೮: ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಸಾವು ಪ್ರಕರಣದಲ್ಲಿ ಶಶಿಕಲಾ ಹಾಗೂ ವೈದ್ಯಕೀಯ ಸಿಬ್ಬಂದಿ ತನಿಖೆಗೆ ನ್ಯಾ. ಆರ್ಮುಗಸ್ವಾಮಿ ವಿಚಾರಣಾ ಸಮಿತಿ ಆದೇಶಿಸಿದೆ. ಇಂದು ಸಮಿತಿಯ ವರದಿ ಮಂಡನೆಯಾಗಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ವರದಿಯನ್ನು ಮಂಡನೆ ಮಾಡಲಾಯಿತು. ಪ್ರಕರಣದ ಸಂಬAಧ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ವೈದ್ಯ ಶಿವಕುಮಾರ್, ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ. ೨೦೧೬ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆಸ್ಪತ್ರೆಯಲ್ಲಿ ದೀರ್ಘಾವಧಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಈ ಸಮಿತಿಯನ್ನು ರಚಿಸಿತ್ತು. ಸಮಿತಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಸರ್ಕಾರಿ ತನಿಖೆ ಕುರಿತು ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಎಲ್ಲಾ ಅಂಶಗಳನ್ನೂ ಪರಿಶೀಲಿಸಿದ ನಂತರ ವಿಕೆ ಶಶಿಕಲಾ, ಕೆಎಸ್ ಶಿವಕುಮಾರ್, ಡಾ. ಸಿ. ವಿಜಯ ಭಾಸ್ಕರ್, ಜೆ ರಾಧಾಕೃಷ್ಣನ್ ಅವರಿಂದ ತಪ್ಪಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕೆಂಬ ನಿರ್ಧಾರಕ್ಕೆ ಸಮಿತಿ ಬಂದಿರುತ್ತದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಇಂಡೋನೇಷ್ಯಾದ ಫುಟ್‌ಬಾಲ್ ಕ್ರೀಡಾಂಗಣ ನೆಲಸಮಕ್ಕೆ ನಿರ್ಧಾರ
ಜಕಾರ್ತ, ಅ. ೧೮: ಈ ತಿಂಗಳ ಆರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ೧೩೩ ಜನ ಸಾವನ್ನಪ್ಪಿದ ಇಂಡೋನೇಷ್ಯಾದ ಫುಟ್‌ಬಾಲ್ ಕ್ರೀಡಾಂಗಣವನ್ನು ನೆಲಸಮ ಮಾಡಿ ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೋ ನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರು ಹೇಳಿದ್ದಾರೆ. ಮಲಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ನಾವು ಫೀಫಾ ಮಾನದಂಡಗಳ ಪ್ರಕಾರ ಕೆಡವುತ್ತೇವೆ ಮತ್ತು ಮರುನಿರ್ಮಾಣ ಮಾಡುತ್ತೇವೆ ಎಂದು ಫೀಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅವರನ್ನು ಭೇಟಿಯಾದ ನಂತರ ಜೊಕೊ ವಿಡೊಡೊ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಕ್ಟೋಬರ್ ೧ ರಂದು ಪೂರ್ವ ಜಾವಾದ ಮಲಂಗ್ ನಗರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ೪೦ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ೧೩೩ ಮಂದಿ ಮೃತಪಟ್ಟಿದ್ದರು. ಇದು "ಫುಟ್‌ಬಾಲ್‌ಗೆ ಕರಾಳ ದಿನ" ಎಂದು ಇನ್ಫಾಂಟಿನೊ ವಿವರಿಸಿದ್ದಾರೆ.
ಅಮಿತ್ ಶಾ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಅ. ೧೮: ೨೦೦೨ರ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯೇ ಆದೇಶ ನೀಡಿದ್ದು, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಗೃಹ ಸಚಿವಾ ಲಯ ನೀಡಿರುವ ಆದೇಶವು ಬಿಜೆಪಿ ನಾಯಕರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಅಮಾನವೀಯ ರಣಹದ್ದುಗಳಿಗೆ ಕ್ಷಮಾದಾನ ನೀಡುವ ಮೂಲಕ ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ. ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ಇಡೀ ರಾಷ್ಟçದ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಶಾಸಕ ಎಲ್ದೋಸ್ ಕುನ್ನಪಿಲ್ಲಿ ವಿರುದ್ಧ ಕೊಲೆಯತ್ನ ಪ್ರಕರಣ
ತಿರುವನಂತಪುರA, ಅ. ೧೮: ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಎಲ್ದೋಸ್ ಕುನ್ನಪಿಲ್ಲಿ ವಿರುದ್ಧ ಇದೀಗ ಕ್ರೆöÊಂ ಬ್ರಾಂಚ್ ಪೊಲೀಸರು ಕೊಲೆಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಪೆರುಂಬವೂರು ಶಾಸಕ ಎಲ್ದೋಸ್ ಕುನ್ನಪಿಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಇಲ್ಲಿನ ಮ್ಯಾಜಿಸ್ಟೆçÃಟ್ ನ್ಯಾಯಾಲಯವು ತಾ. ೧೯ ರಂದು (ಇಂದು) ಪ್ರಕಟಿಸುವ ನಿರೀಕ್ಷೆಯಿದೆ. ಇದರ ಮಧ್ಯೆ ಅಪರಾಧ ವಿಭಾಗವು ಅವರ ವಿರುದ್ಧ ಕೊಲೆ ಯತ್ನದ ಗಂಭೀರ ಆರೋಪ ಹೊರಿಸಿದೆ. ಕೋವಲಂನಲ್ಲಿ ತನ್ನನ್ನು ತಳ್ಳಿ ಕೊಲೆ ಮಾಡಲು ಶಾಸಕರು ಯತ್ನಿಸಿದ್ದರು ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ. ಮ್ಯಾಜಿಸ್ಟೆçÃಟ್ ಮುಂದೆ ಆಕೆ ಈ ಹೇಳಿಕೆ ನೀಡಿದ್ದು, ಇವುಗಳ ಆಧಾರದ ಮೇಲೆ ಹೊಸ ಐಪಿಸಿ ಸೆಕ್ಷನ್ ಅಡಿಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.