ಮಡಿಕೇರಿ, ಅ. ೧೮: ಬೆಂಗಳೂರಿನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಆರ್ಟ್ ಅಕಾಡೆಮಿಯ ವತಿಯಿಂದ ತಾ. ೧೫ ಮತ್ತು ೧೬ ರಂದು ಬೆಂಗಳೂರಿನಲ್ಲಿ ನಡೆದ ಪ್ರಥಮ ರಾಷ್ಟಿçÃಯ ಮುಕ್ತ ಟೆಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಮಡಿಕೇರಿಯ ಆದ್ಯಾ ಜಿ. ವರ್ಣೇಕರ್ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕ ಹಾಗೂ ಮಾನ್ವಿ ಜಿ. ವರ್ಣೇಕರ್ ಎರಡು ಬೆಳ್ಳಿಯ ಪದಕ ಮತ್ತು ನಿಧಿ ಆರ್. ಅಣ್ವೇಕರ್ ಒಂದು ಚಿನ್ನ ಹಾಗೂ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಮಡಿಕೇರಿ ಗುರು ಜ್ಯುವೆಲ್ಲರ್ಸ್ ಮಾಲೀಕ ಗುರುಕಿರಣ್ ಹಾಗೂ ನಾರಾಯಣಿ ಜ್ಯುವೆಲ್ಲರ್ಸ್ ಮಾಲೀಕ ಬಿ.ಎಂ. ರಾಜೇಶ್ರವರ ಮಕ್ಕಳಾಗಿದ್ದಾರೆ. ನಗರದ ಲೋಕೇಶ್ ರೈ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.