ಸುಂಟಿಕೊಪ್ಪ, ಅ. ೧೮: ಇಲ್ಲಿನ ಮಲಯಾಳಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ೧೫ನೇ ವರ್ಷದ ಓಣಂ ಆಚರಣೆ ಅಂಗವಾಗಿ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಿತು.

ಸಾಂಪ್ರದಾಯಿಕ ಉಡುಗೆ ತೊಟ್ಟ ಮಲೆಯಾಳಿ ಬಾಂದವರು ಚಂಡೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿದರು. ಈ ಸಂದರ್ಭ ಬಲಿಚಕ್ರವರ್ತಿಯ ವೇಷಧಾರಿ ಗಮನ ಸೆಳೆದರು.