ಮಡಿಕೇರಿ, ಅ. ೧೬: ತಿತಿಮತಿ ಸಮೀಪದ ಭದ್ರಗೊಳ ಗ್ರಾಮದ ಅಡಿಕೆ ತೋಟವೊಂದರಲ್ಲಿ ಇದೇ ತಿಂಗಳ ೭ ರಂದು ಶವವಾಗಿ ಪತ್ತೆಯಾಗಿದ್ದ ಮೂಡಗದ್ದೆ ಪಿ. ಯಶ್ವಂತ್ ಕುಮಾರ್ ಅವರ ಸಾವು ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ಮನೆಯಿಂದ ಅಪಹರಿಸಿದ ೪ ದಿನಗಳ ನಂತರ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟದ ತನಿಖೆಯಿಂದ ಬಹಿರಂಗಗೊAಡಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೆಚ್ಚುವರಿಯಾಗಿ ೩೦೨ ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಯಶ್ವಂತ್ ಕುಮಾರನ ಚಿಕ್ಕಪ್ಪನ ಮಗ ಮೂಡಗದ್ದೆ ಕಿರಣ್ ಚಿಣ್ಣಪ್ಪ ಎಂಬಾತನನ್ನು ಬಂಧಿಸಿದ್ದಾರೆ.
ತಾ. ೮ ರಂದು ಮೃತ ಯಶ್ವಂತ್ ಕುಮಾರ್ ಅವರ ಪತ್ನಿ ಎಂ.ವೈ. ಮಲ್ಲಿಕಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಮೃತನ ಪತ್ನಿ ಮಲ್ಲಿಕಾ ನೀಡಿದ ದೂರಿನ ಅನ್ವಯ ಪ್ರಕರಣಕ್ಕೆ ಕಲಂ ೩೦೨ ಮತ್ತು ೧೧೪ ಐಪಿಸಿ ಅನ್ನು ಹೆಚ್ಚುವರಿಯಾಗಿ
(ಮೊದಲ ಪುಟದಿಂದ) ಸೇರಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದರು. ಮೇಲ್ನೋಟದ ತನಿಖೆಯಲ್ಲಿ ಕೃತ್ಯ ಬಯಲಾಗುತ್ತಿದ್ದಂತೆ ಅದಾಗಲೇ ಪೊಲೀಸರ ವಶದಲ್ಲಿದ್ದ ಕಿರಣ್ ಚಿಣ್ಣಪ್ಪನನ್ನು ಕೊಲೆ ಆರೋಪಿ ಎಂದು ಪರಿಗಣಿಸಿ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾ. ೩ ರಂದು ಸೋಮವಾರ ರಾತ್ರಿ ೧೦.೩೦ ಗಂಟೆಗೆ ಮನೆಗೆ ಅಕ್ರಮ ಪ್ರವೇಶ ಮಾಡಿದ್ದ ಕಿರಣ್ ಚಿಣ್ಣಪ್ಪ ಯಶ್ವಂತ್ ಕುಮಾರ್ನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಎಳೆದೊಯ್ದಿದ್ದ. ಮರುದಿನ ಗಂಡನ ಬಗ್ಗೆ ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಯಶ್ವವಂತ್ ಕುಮಾರ್ ಪತ್ನಿ ಮಲ್ಲಿಕಾ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ತೆರಳಿ ಕಿರಣ್ ಚಿಣ್ಣಪ್ಪ ತನ್ನ ಗಂಡನನ್ನು ಹಲ್ಲೆ ನಡೆಸಿ ಅಪಹರಿಸಿದ್ದು, ಇದಕ್ಕೆ ನಾನೇ ಸಾಕ್ಷಿಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಮಲ್ಲಿಕಾ ಅವರ ಮೊದಲ ದೂರನ್ನು ಸ್ವೀಕರಿಸಿದ ಗೋಣಿಕೊಪ್ಪ ಪೊಲೀಸರು ಠಾಣೆಯ ಮೊಕದ್ದಮೆ ಸಂಖ್ಯೆ ೧೩೯/೨೦೨೨ರ ಕಲಂ ೩೨೪ ಮತ್ತು ೩೬೩ ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದರು.
ಅಪಹರಿಸಲ್ಪಟ್ಟ ಗಂಡ ಯಶ್ವಂತನ ಪತ್ತೆಗಾಗಿ ನಿರಂತರವಾಗಿ ಹುಡುಕಾಟ ಮುಂದುವರಿಸುತ್ತಿದ್ದ ಸಂದರ್ಭದಲ್ಲಿ ತಾ. ೭ ರಂದು ಬೆಳಿಗ್ಗೆ ೯ ಗಂಟೆಗೆ ಮನೆಯ ಸಮೀಪವಿರುವ ಅಡಿಕೆ ತೋಟವೊಂದರಲ್ಲಿ ಯಶ್ವಂತ್ ಕುಮಾರ್ ಅವರ ಮೃತ ದೇಹ ಪತ್ತೆಯಾಗಿತ್ತು.
ಅಪಹರಣಗೊಂಡು ೪ ದಿನಗಳ ನಂತರ ಮೃತದೇಹ ಪತ್ತೆಯಾಗಿರುತ್ತದೆ. ಯಶ್ವಂತ್ ಕುಮಾರ್ ಅಪಹರಣಗೊಂಡ ನಂತರ ನಮ್ಮ ಮನೆಯ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ತೋಟ, ಗದ್ದೆ ಭಾಗಗಳಲ್ಲಿ ಸಂಪೂರ್ಣವಾಗಿ ಶೋಧಿಸಿದ್ದರೂ ತಾ. ೭ರ ಬೆಳಗ್ಗಿನವರೆಗೂ ಯಾವುದೇ ಸುಳಿವಿರಲಿಲ್ಲ. ಆರೋಪಿ ಗಂಡನ ಮೃತ ದೇಹವನ್ನು ಅಲ್ಲಿಗೆ ತಂದು ಎಸೆದಿದ್ದಾನೆ ಎಂದು ಮಲ್ಲಿಕಾ ಪೊಲೀಸರಿಗೆ ತಿಳಿಸಿದ್ದರು.
ಆರೋಪಿ ಕಿರಣ್ ಚಿಣ್ಣಪ್ಪ ಮತ್ತು ಅವರ ಕುಟುಂಬದವರು ಹಿಂದಿನಿAದಲೂ ನಮಗೆ ತೀವ್ರ ಕಿರುಕುಳ ನೀಡುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬAಧಿಸಿದAತೆ ಅನಗತ್ಯವಾಗಿ ಮಾನಸಿಕ ಹಿಂಸೆ ಮತ್ತು ದೈಹಿಕ ಹಲ್ಲೆ ಯತ್ನ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದ ಇವರು, ನಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದರು. ಆಸ್ತಿ ವಿಚಾರಕ್ಕೆ ಸಂಬAಧಿಸಿದ ವಿವಾದ ನ್ಯಾಯಾಲಯದಲ್ಲಿದ್ದರೂ ಕಿರಣ್ ಚಿಣ್ಣಪ್ಪ ನನ್ನ ಗಂಡನ ಹತ್ಯೆಗಾಗಿ ಹಿಂದಿನಿAದಲೂ ಸಂಚು ರೂಪಿಸಿದ್ದ. ಈತನ ನಿರಂತರವಾದ ಕಿರುಕುಳದ ವಿಚಾರವಾಗಿ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ದೂರು ನೀಡಲಾಗಿದ್ದು, ಈ ಬಗ್ಗೆ ಆತನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಬಳಿಕ ಬಿಡುಗಡೆ ಮಾಡುತ್ತಿದ್ದರು ಎಂದು ಮಲ್ಲಿಕಾ ತಿಳಿಸಿದ್ದಾರೆ.
ಗಂಡ ಯಶ್ವಂತ್ ಕುಮಾರ್ನ ಕೊಲೆ ಕೇವಲ ಆರೋಪಿ ಕಿರಣ್ ಚಿಣ್ಣಪ್ಪ ಒಬ್ಬನಿಂದ ಮಾತ್ರ ನಡೆದಿರುವ ಸಾಧ್ಯತೆಯಿಲ್ಲ. ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆಯಿದೆ. ಆದ್ದರಿಂದ ಈ ಬಗ್ಗೆ ಮತ್ತಷ್ಟು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದವರೆಲ್ಲರನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಂಡು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮೃತನ ಪತ್ನಿ ಮಲ್ಲಿಕಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.